ADVERTISEMENT

ಯಜುವೇಂದ್ರ ಚಾಹಲ್‌ರನ್ನು ಆಡಿಸುವ ಇರಾದೆ ಇರಲಿಲ್ಲ: ವಿರಾಟ್ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 16:11 IST
Last Updated 4 ಡಿಸೆಂಬರ್ 2020, 16:11 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಕ್ಯಾನ್‌ಬೆರಾ: ಈ ದಿನದ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಅವರನ್ನು ಆಡಿಸುವ ಯಾವುದೇ ಯೋಚನೆ ನಮಗಿರಲಿಲ್ಲ. ಆದರೆ ಕಂಕಷನ್‌ ನಿಯಮ ಪಾಲನೆ ಇದ್ದ ಕಾರಣ ಆಡಿಸಬೇಕಾಯಿತು. ಅದು ಫಲ ನೀಡಿತು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಶುಕ್ರವಾರ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ’ಚಾಹಲ್ ಅವರನ್ನು ಹನ್ನೊಂದರ ಬಳಗದಲ್ಲಿ ಆಯ್ಕೆ ಮಾಡಿರಲಿಲ್ಲ. ಜಡೇಜ ಬ್ಯಾಟಿಂಗ್ ಚೆನ್ನಾಗಿತ್ತು. ಆದರೆ ಹೆಲ್ಮೆಟ್‌ಗೆ ಚೆಂಡು ಬಡಿದ ನಂತರ ತಮ್ಮ ತಲೆ ಸುತ್ತುವಂತೆ ಭಾಸವಾಗುತ್ತಿದೆಯೆಂದು ಅವರು ಹೇಳಿದ್ದರು. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಯಿತು‘ ಎಂದರು.

’ಕಂಕಷನ್ ಬದಲಾವಣೆಯು ಅಪರೂಪಕ್ಕೆ ನಡೆಯುವಂತಹದ್ದು. ಇವತ್ತು ನಮಗೆ ಅದು ಫಲಪ್ರದವಾಗಿದೆ. ಮುಂದೆ ಇಂತಹ ಸಂದರ್ಭ ಮತ್ತೆ ಎದುರಾದರೆ ನಮ್ಮ ಪರವಾಗಿ ಅದು ಫಲ ನೀಡಲಿಕ್ಕಿಲ್ಲ. ಅಲ್ಲದೇ ಸಮ–ಸಮ ಆಟಗಾರನ ಲಭ್ಯತೆಯೂ ಸಿಗಲಿಕ್ಕಿಲ್ಲ‘ ಎಂದು ಕೊಹ್ಲಿ ಹೇಳಿದರು.

ADVERTISEMENT

’ಚಾಹಲ್ ಕಣಕ್ಕಿಳಿದು ಅಮೋಘವಾಗಿ ಬೌಲಿಂಗ್ ಮಾಡಿದರು. ಪಿಚ್‌ನ ಗುಣವನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಎದುರಾಳಿಗಳನ್ನು ಮಣಿಸುವ ತಮ್ಮ ಸ್ವಭಾವವನ್ನು ಚಾಹಲ್ ತೋರಿಸಿದರು. ಆಸ್ಟ್ರೇಲಿಯಾ ಬ್ಯಾಟಿಂಗ್ ನ ಆರಂಭ ಚೆನ್ನಾಗಿಯೇ ಇತ್ತು. ಆದರೆ ನಮ್ಮ ಬೌಲರ್‌ಗಳ ಶ್ರಮಕ್ಕೆ ಫಲ ಸಿಕ್ಕಿತು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.