ADVERTISEMENT

2nd ODI | Bangladesh Vs West Indies: ವಿಂಡೀಸ್ ಬಳಗಕ್ಕೆ ‘ಸೂಪರ್’ ಜಯ

ಏಜೆನ್ಸೀಸ್
Published 21 ಅಕ್ಟೋಬರ್ 2025, 21:05 IST
Last Updated 21 ಅಕ್ಟೋಬರ್ 2025, 21:05 IST
ಶಾಯ್ ಹೋಪ್ 
ಶಾಯ್ ಹೋಪ್    

ಮೀರ್‌ಪುರ್ : ವೆಸ್ಟ್ ಇಂಡೀಸ್‌ ತಂಡವು ಮಂಗಳವಾರ ಇಲ್ಲಿ ಬಾಂಗ್ಲಾದೇಶ ಎದುರು ನಡೆದ ಏಕದಿನ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಜಯಭೇರಿ ಬಾರಿಸಿತು. ಅದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. 

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 50 ಓವರ್‌ಗಳಲ್ಲಿ  7 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಈ ಇನಿಂಗ್ಸ್‌ನಲ್ಲಿ ಎಲ್ಲ 50 ಓವರ್‌ಗಳನ್ನೂ ವಿಂಡೀಸ್‌ನ ಸ್ಪಿನ್ನರ್‌ಗಳು ಮಾಡಿದರು. ಇದು ಅಪರೂಪದ ದಾಖಲೆಯಾಗಿದೆ. 

ಅದಕ್ಕುತ್ತರವಾಗಿ ವೆಸ್ಟ್ ಇಂಡೀಸ್ ಕೂಡ  9 ವಿಕೆಟ್‌ಗಳಿಗೆ 213 ರನ್ ಗಳಿಸಿ ಟೈ ಮಾಡಿತು. 

ADVERTISEMENT

ಸೂಪರ್ ಓವರ್‌ನಲ್ಲಿ ವಿಂಡೀಸ್ ತಂಡವು 1 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿತು. ಬಾಂಗ್ಲಾ 1 ವಿಕೆಟ್‌ಗೆ 9 ರನ್ ಗಳಿಸಿ ಸೋತಿತು. 

ಸಂಕ್ಷಿಪ್ತ ಸ್ಕೋರು:

ಬಾಂಗ್ಲಾದೇಶ: 50 ಓವರ್‌ಗಳಲ್ಲಿ 7ಕ್ಕೆ 213 (ಸೌಮ್ಯಾ ಸರ್ಕಾರ್ 45, ಮೆಹದಿ ಹಸನ್ ಮಿರಾಜ್ 32, ನುರೂಲ್ ಹಸನ್ 23, ರಿಷಾದ್ ಹುಸೇನ್ ಔಟಾಗದೇ 39, ಅಕೀಲ್ ಹುಸೇನ್ 41ಕ್ಕೆ2, ಗುಡಕೇಶ್ ಮೋತಿ 65ಕ್ಕೆ3, ಅಲಿಕ್ ಅಥನೇಜ್ 14ಕ್ಕೆ2) ವೆಸ್ಟ್ ಇಂಡೀಸ್: 50 ಓವರ್‌ಗಳಲ್ಲಿ 9ಕ್ಕೆ213 (ಅಲಿಕ್ ಅಥನೇಜ್ 28, ಶಾಯ್ ಹೋಪ್ ಔಟಾಗದೇ 53, ಜಸ್ಟಿನ್ ಗ್ರೀವ್ಸ್ 26, ನಸುಮ್ ಅಹಮದ್ 38ಕ್ಕೆ2, ತನ್ವೀರ್ ಇಸ್ಲಾಂ 42ಕ್ಕೆ2, ರಿಷಾದ್ ಹುಸೇನ್ 42ಕ್ಕೆ3) ಫಲಿತಾಂಶ: ಸೂಪರ್ ಓವರ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.