ADVERTISEMENT

ಮಹಿಳೆಯರ ಟ್ವೆಂಟಿ–20 ವಿಶ್ವಕಪ್: ಥಾಯ್ಲೆಂಡ್‌ ಎದುರು ನ್ಯೂಜಿಲೆಂಡ್ ಜಯಭೇರಿ

ಪಿಟಿಐ
Published 22 ಫೆಬ್ರುವರಿ 2020, 19:36 IST
Last Updated 22 ಫೆಬ್ರುವರಿ 2020, 19:36 IST
ಸ್ಟೆಫಾನಿ ಟೇಲರ್
ಸ್ಟೆಫಾನಿ ಟೇಲರ್   

ಪರ್ತ್: ಆಲ್‌ರೌಂಡ್ ಆಟ ಪ್ರದರ್ಶಿಸಿದ ಸ್ಟೆಫಾನಿ ಟೇಲರ್, ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್‌ಗೆ ಸುಲಭ ಜಯ ಗಳಿಸಿಕೊಟ್ಟರು. ವಾಕಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಥಾಯ್ಲೆಂಡ್ ತಂಡವನ್ನು ವೆಸ್ಟ್ ಇಂಡೀಸ್ ಏಳು ವಿಕೆಟ್‌ಗಳಿಂದ ಮಣಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಥಾಯ್ಲೆಂಡ್‌ ಆಟಗಾರ್ತಿಯರು ಎದುರಾಳಿಗಳ ಬೌಲಿಂಗ್‌ ಉತ್ತರಿಸಲು ಪರದಾಡಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ವುಮನ್ ನಾನಾಪತ್ ಕೊಂಚರೆಂಕೊಯಿ ಸ್ವಲ್ಪ ಪ್ರತಿರೋಧ ತೋರಿ ತಂಡ 78 ರನ್ ಗಳಿಸಲು ನೆರವಾದರು.

ವಿಂಡೀಸ್‌ ನಾಲ್ಕನೇ ವಿಕೆಟ್‌ಗೆ ಟೇಲರ್ ಮತ್ತು ಶೆಮೈನ್ ಕ್ಯಾಂಬೆಲಿ ಸೇರಿಸಿದ 53 ರನ್‌ಗಳ ಬಲದಿಂದ 17ನೇ ಓವರ್‌ನಲ್ಲೇ ಗೆಲುವು ಸಾಧಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರು: ಥಾಯ್ಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 78 (ನಾನಾಪತ್ ಕೊಂಚರೆಂಕೊಯಿ 33; ಸ್ಟೆಫಾನಿ ಟೇಲರ್ 13ಕ್ಕೆ3); ವೆಸ್ಟ್ ಇಂಡೀಸ್‌: 16.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 80 (ಸ್ಟೆಫಾನಿ ಟೇಲರ್ ಔಟಾಗದೆ 26, ಶೆಮಾನಿ ಕ್ಯಾಂಬೆಲಿ 25). ಫಲಿತಾಂಶ: ವೆಸ್ಟ್ ಇಂಡೀಸ್ ಮಹಿಳೆಯರಿಗೆ 7 ವಿಕೆಟ್‌ಗಳ ಜಯ.

ನ್ಯೂಜಿಲೆಂಡ್‌ಗೆ 7 ವಿಕೆಟ್‌ ಜಯ: ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾವನ್ನು ನ್ಯೂಜಿಲೆಂಡ್ 7 ವಿಕೆಟ್‌ಗಳಿಂದ ಮಣಿಸಿತು. ನಾಯಕಿ ಚಾಮರಿ ಅಟಪಟ್ಟು ಅವರ 41 ರನ್‌ಗಳ ನೆರವಿನಿಂದ ಶ್ರೀಲಂಕಾ 127 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 18ನೇ ಓವರ್‌ನಲ್ಲಿ ಗೆವುಲು ದಾಖಲಿಸಿತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 127 (ಹಸಿನಿ ಪೆರೇರ 20, ಚಾಮರಿ ಅಟಪಟ್ಟು 41, ಹರ್ಷಿತಾ ಮಾಧವಿ 27; ಅಮೆಲಿಯಾ ಕೆರ್ 21ಕ್ಕೆ2, ಹೆಯ್ಲಿ ಜೆನ್ಸೆನ್ 16ಕ್ಕೆ3); ನ್ಯೂಜಿಲೆಂಡ್: 17.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 131 (ಸೋಫಿ ಡಿವೈನ್ ಔಟಾಗದೆ 75, ಮ್ಯಾಡಿ ಗ್ರೀನ್ 29) ಫಲಿತಾಂಶ: ನ್ಯೂಜಿಲೆಂಡ್‌ಗೆ 7 ವಿಕೆಟ್‌
ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.