ADVERTISEMENT

ರಹಾನೆ, ಹನುಮ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:28 IST
Last Updated 19 ಆಗಸ್ಟ್ 2019, 20:28 IST
ಬಿಸಿಸಿಐ ಟ್ವಿಟರ್‌ ಚಿತ್ರ
ಬಿಸಿಸಿಐ ಟ್ವಿಟರ್‌ ಚಿತ್ರ   

ಕೂಲಿಡ್ಜ್‌, ಆ್ಯಂಟಿಗಾ: ನಾಯಕ ಅಜಿಂಕ್ಯ ರಹಾನೆ (54; 162ಎ, 5ಬೌಂ, 1ಸಿ) ಮತ್ತು ಹನುಮ ವಿಹಾರಿ (64; 125ಎ, 9ಬೌಂ, 1ಸಿ) ಕೂಲಿಡ್ಜ್‌ ಕ್ರಿಕೆಟ್‌ ಮೈದಾನದಲ್ಲಿ ಸೋಮವಾರ ಅರ್ಧಶತಕ ಗಳಿಸಿ ಗಮನ ಸೆಳೆದರು.

ಇವರ ಉತ್ತಮ ಜೊತೆಯಾಟದಿಂದಾಗಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ‘ಎ’ ನಡುವಣ ಮೂರು ದಿನಗಳ ಅಭ್ಯಾಸ ಪಂದ್ಯ ಡ್ರಾ ಆಯಿತು. ರಹಾನೆ ಪಡೆಯು ವಿಂಡೀಸ್‌ ಗೆಲುವಿಗೆ 305ರನ್‌ಗಳ ಕಠಿಣ ಗುರಿ ನೀಡಿತ್ತು.

ಸಂಕ್ಷಿಪ್ತ ಸ್ಕೋರ್‌: ಭಾರತ: ಮೊದಲ ಇನಿಂಗ್ಸ್‌; 88.5 ಓವರ್‌ಗಳಲ್ಲಿ 297 ಮತ್ತು 78 ಓವರ್‌ಗಳಲ್ಲಿ 5 ವಿಕೆಟ್‌ಗೆ 188 ಡಿಕ್ಲೇರ್ಡ್‌ (ಮಯಂಕ್‌ ಅಗರವಾಲ್‌ 13, ಅಜಿಂಕ್ಯ ರಹಾನೆ 54, ಹನುಮ ವಿಹಾರಿ 64, ರಿಷಭ್‌ ಪಂತ್‌ 19, ವೃದ್ಧಿಮಾನ್‌ ಸಹಾ ಔಟಾಗದೆ 14, ರವಿಚಂದ್ರನ್‌ ಅಶ್ವಿನ್‌ ಔಟಾಗದೆ 10; ರೊಮೇರಿಯೊ ಶೆಫರ್ಡ್‌ 3ಕ್ಕೆ1, ಖಾರಿ ಪಿಯೆರ್‌ 72ಕ್ಕೆ1, ಅಕೀಂ ಫ್ರೇಜರ್‌ 43ಕ್ಕೆ2).

ADVERTISEMENT

ವೆಸ್ಟ್‌ ಇಂಡೀಸ್‌ ‘ಎ’: ಮೊದಲ ಇನಿಂಗ್ಸ್‌; 56.1 ಓವರ್‌ಗಳಲ್ಲಿ 181 (ಕಾವೆಮ್‌ ಹಾಡ್ಜ್‌ 51, ಡರೆನ್‌ ಬ್ರಾವೊ 11, ಜೊನಾಥನ್‌ ಕಾರ್ಟರ್‌ 26, ಜಹಮರ್‌ ಹ್ಯಾಮಿಲ್ಟನ್‌ 33, ರಾವಮನ್‌ ಪೊವೆಲ್‌ 16, ಖಾರಿ ಪಿಯೆರ್‌ 17; ಇಶಾಂತ್‌ ಶರ್ಮಾ 21ಕ್ಕೆ3, ಉಮೇಶ್‌ ಯಾದವ್‌ 19ಕ್ಕೆ3, ಕುಲದೀಪ್‌ ಯಾದವ್‌ 35ಕ್ಕೆ3). ಮತ್ತು 21 ಓವರ್‌ಗಳಲ್ಲಿ 3 ವಿಕೆಟ್‌ಗೆ 47 (ಜೆರೆಮಿ ಸೋಲೊಜಾನೊ 16, ಬ್ರೆಂಡನ್‌ ಕಿಂಗ್‌ 14; ಜಸ್‌ಪ್ರೀತ್‌ ಬೂಮ್ರಾ 13ಕ್ಕೆ1, ರವಿಚಂದ್ರನ್‌ ಅಶ್ವಿನ್‌ 18ಕ್ಕೆ1, ರವೀಂದ್ರ ಜಡೇಜ 3ಕ್ಕೆ1). ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.