ADVERTISEMENT

ದೀಪಕ್‌ ಚಾಹರ್‌ ಬೌಲಿಂಗ್‌ ದಾಳಿಗೆ ವಿಂಡೀಸ್‌ ತತ್ತರ!

ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಬೌಲರ್‌

ಏಜೆನ್ಸೀಸ್
Published 6 ಆಗಸ್ಟ್ 2019, 16:29 IST
Last Updated 6 ಆಗಸ್ಟ್ 2019, 16:29 IST
   

ಪ್ರಾವಿಡೆನ್ಸ್‌: ವೆಸ್ಟ್ ಇಂಡೀಸ್‌ ಎದುರಿನ ಮೂರನೇ ಮತ್ತು ಅಂತಿಮ ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಟಾಸ್‌ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿರುವ ಭಾರತ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದೆ.ಕೇವಲ ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿರುವ ವಿಂಡೀಸ್‌ ಆರಂಭಿಕ ಆಘಾತ ಅನುಭವಿದೆ.

ಟಾಸ್‌ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಗಟ್ಟಿಸಿಕೊಂಡ ವಿಂಡೀಸ್‌ 14 ರನ್‌ಗಳಿಗೆ ಮೊದಲ ಪ್ರಮುಖ ಮೂರುವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ತಂಡ ಸಂಕಷ್ಟ ಅನುಭವಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಸುನಿಲ್‌ ನರೇನ್‌ (2) ಮತ್ತು ಎವಿನ್‌ ಲೆವಿಸ್‌ (10) ಮತ್ತು ಹೆಟ್‌ಮೇಯರ್‌ (1) ಔಟಾಗಿ ಪೆವಿಲಿಯನ್‌ ಸೇರಿದ್ದಾರೆ. ಸದ್ಯ ಪೊಲಾರ್ಡ್‌, ಪೂರನ್‌ ಬ್ಯಾಟ್‌ ಮಾಡುತ್ತಿದ್ದಾರೆ.

ಪದಾರ್ಪಣೆ ಪಂದ್ಯದಲ್ಲೇಮಿಂಚಿನ ದಾಳಿ

ADVERTISEMENT

ಮಧ್ಯಮ ವೇಗಿ ದೀಪಕ್‌ ಚಾಹರ್‌ ಅವರು ಪದಾರ್ಪಣೆ ಪಂದ್ಯದಲ್ಲೇ ವಿಂಡಿಸ್‌ ಮೇಲೆ ಮೊನಚಿನ ದಾಳಿ ನಡೆಸುತ್ತಿದ್ದು, ಸದ್ಯ 3 ವಿಕೆಟ್‌ಗಳನ್ನು ಬಾಚಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.