ಭಾರತದ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್
ಚಿತ್ರ ಕೃಪೆ: WomenCricketHQ
ಕೊಲಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳೆಯರ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದಿರುವ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಸದ್ಯ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಆತಿಥೇಯ ಶ್ರೀಲಂಕಾ ಒಂದರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ತಂಡವಾದ ದಕ್ಷಿಣ ಆಫ್ರಿಕಾ ಮೊದಲ ಎರಡೂ ಪಂದ್ಯಗಳನ್ನು ಸೋಲನುಭವಿಸಿ ಕೊನೇ ಸ್ಥಾನದಲ್ಲಿದೆ.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ ಸೋಲು ಕಂಡಿದ್ದರೂ, ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಗೆದ್ದು ಉತ್ಸಾಹ ಉಳಿಸಿಕೊಂಡಿದೆ. ಹೀಗಾಗಿ ಇಂದು ನಡೆಯುತ್ತಿರುವ ನಾಲ್ಕನೇ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲುವ ತವಕದಲ್ಲಿದೆ.
ಇನ್ನೊಂದೆಡೆ, ಶ್ರೀಲಂಕಾ ವಿರುದ್ಧ ಗೆದ್ದು ಅಭಿಯಾನ ಆರಂಭಿಸಿದ್ದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧವೂ ಗೆಲುವಿನ ರುಚಿ ಕಂಡಿತ್ತು. ಈಗ ಮೂರನೇ ಗೆಲುವಿತ್ತ ಭಾರತ ಚಿತ್ತ ಇರಿಸಿದೆ.
ತಂಡ
ಭಾರತ: ಪ್ರತಿಕಾ ರಾವಲ್, ಸ್ಮೃತಿ ಮಂದಾನಾ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಕಾಶ್ವೀ ಗೌತಮ್, ಅರುಂಧತಿ ರೆಡ್ಡಿ, ಸ್ನೇಹ ರಾಣಾ, ನಲ್ಲಪುರೆಡ್ಡಿ ಚರಣಿ
ಶ್ರೀಲಂಕಾ: ಹಾಸಿನಿ ಪೆರೇರಾ, ಚಾಮರಿ ಅಥಾಪತ್ತು (ನಾಯಕಿ), ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ದೇವ್ಮಿ ವಿಹಂಗಾ, ಮಲ್ಕಿ ಮಾದರ, ಸುಗಂದಿಕಾ ಕುಮಾರಿ, ಇನೋಕಾ ರಣವೀರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.