ಮೆಗ್ ಲ್ಯಾನಿಂಗ್
(ಚಿತ್ರ ಕೃಪೆ: X@wplt20)
ಲಖನೌ: ಹರ್ಲೀನ್ ಡಿಯೊಲ್ (70;49ಎಸೆತ, 4x9, 6x1) ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶುಕ್ರವಾರ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಕಲೆ ಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್ ಜೈಂಟ್ಸ್‌ತಂಡ 19.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.
ಆರಂಭಿಕ ಜೋಡಿ ಮೆಗ್ ಲ್ಯಾನಿಂಗ್ (92 ರನ್, 57 ಎ) ಮತ್ತು ಶಫಾಲಿ ವರ್ಮಾ (40; 27ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 83 ರನ್ ಗಳಿಸಿದರು. ಲ್ಯಾನಿಂಗ್ ಕೊನೆಯ ಓವರ್‌ನಲ್ಲಿ ಔಟಾಗುವವರೆಗೂ ತಂಡವನ್ನು ಬಲಪಡಿಸಿದರು. ಆದರೆ ಶಫಾಲಿ ಔಟಾದ ನಂತರ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಜೆಸ್ ಜೊನಾಸೆನ್ (9 ರನ್),ಜೆಮಿಮಾ ರಾಡ್ರಿಗಸ್ (4ರನ್), ಅನ್ನಾಬೆಲ್ ಸದರ್‌ಲ್ಯಾಂಡ್ (14ರನ್), ಮರಿಝಾನ್ ಕಾಪ್ ಔಟಾಗದೇ 7 ಮತ್ತು ಸಾರಾ ಬ್ರೈಸ್ ಔಟಾಗದೇ 6 ರನ್ ಗಳಿಸಿದರು. ಗುಜರಾತ್ ತಂಡದ ಮೇಘನಾ ಸಿಂಗ್ 35ಕ್ಕೆ 3, ದಿಯಾಂದ್ರ ಡಾಟಿನ್ 37ಕ್ಕೆ 2 ವಿಕೆಟ್ ಪಡೆದರು.
178 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡ ಹೇಮಲತಾ ದಯಾಳನ್ (1ರನ್) ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬೆತ್ ಮೂನಿ ಜೊತೆಗೂಡಿದ ಹರ್ಲಿನ್ ಡಿಯೊಲ್ ಎರಡನೇ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು.
ಬೆತ್ ಮೂನಿ (44 ರನ್) ಮಿನು ಮಣಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕಿ ಆಶ್ಲೆ ಗಾರ್ಡನರ್ (22), ನಂತರ ದಿಯಾಂದ್ರ ಡಾಟಿನ್ (24ರನ್) ಮತ್ತು ಫೊಯೆಬಿ ಲಿಚ್‌ಫೀಲ್ಡ್ (0) ಜೆಸ್ ಜೊನಾಸೆನ್‌ಗೆ ವಿಕೆಟ್ ಒಪ್ಪಿಸಿದರು. ಕಾಶ್ವಿ ಗೌತಮ್ ಔಟಾಗದೇ 9 ರನ್ ಗಳಿಸಿದರು. ಹರ್ಲಿನ್ ಡಿಯೊಲ್ ಅಜೇಯ 70 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಡೆಲ್ಲಿ ತಂಡದ ಶಿಖ ಪಾಂಡೆ 31ಕ್ಕೆ 2, ಜೆಸ್ ಜೊನಾಸೆನ್ 38ಕ್ಕೆ 2, ಮಿನು ಮಾಣಿ 15ಕ್ಕೆ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 5ಕ್ಕೆ177 (ಮೆಗ್ ಲ್ಯಾನಿಂಗ್ 92, ಶಫಾಲಿ ವರ್ಮಾ 40, ಮೇಘನಾ ಸಿಂಗ್ 35ಕ್ಕೆ3) ಗುಜರಾತ್ ಜೈಂಟ್ಸ್: 19.3 ಓವರ್‌ಗಳಲ್ಲಿ 5ಕ್ಕೆ 178 (ಹರ್ಲಿನ್ ಡಿಯೊಲ್ ಔಟಾಗದೇ 70, ಬೆತ್ ಮೂನಿ 44, ಶಿಖ ಪಾಂಡೆ 31ಕ್ಕೆ 2,ಜೆಸ್ ಜೊನಾಸೆನ್ 38ಕ್ಕೆ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.