ಬೆತ್ ಮೂನಿ ಬ್ಯಾಟಿಂಗ್ ವೈಖರಿ
ಲಖನೌ: ಬೆತ್ ಮೂನಿ ಅವರ ಅಬ್ಬರದ ಬ್ಯಾಟಿಂಗ್ ಬಳಿಕ ಬೌಲರ್‌ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ 81 ರನ್‌ಗಳಿಂದ ಯು.ಪಿ. ವಾರಿಯರ್ಸ್ ತಂಡವನ್ನು ಮಣಿಸಿತು.
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಲೆಗ್‌ನ ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್‌ತಂಡವು ಮೂನಿ (ಔಟಾಗದೇ 96;59ಎ, 4x17) ಅಬ್ಬರದ ಆಟದ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 186 ರನ್ ಗಳಿಸಿತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್ 17.1 ಓವರ್‌ಗಳಲ್ಲಿ 105 ರನ್‌ಗಳಿಸಿ ಹೋರಾಟ ಮುಗಿಸಿತು.
ಜೈಂಟ್ಸ್‌ನ ವೇಗಿ ದಿಯಾಂದ್ರ ಡಾಟಿನ್ ಮೊದಲ ಓವರ್‌ನಲ್ಲೇ ವಾರಿಯರ್ಸ್‌ಗೆ ಪೆಟ್ಟು ನೀಡಿದರು. ಕಿರಣ್ ನವಗಿರೆ (0) ಮತ್ತು ಜಾರ್ಜಿಯಾ ವೋಲ್ (0) ಅವರಿಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ. ನಂತರವೂ ನಿಯಮಿತವಾಗಿ ವಿಕೆಟ್ ಉರುಳಿದವು. ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ (25;30ಎ) ಮತ್ತು ಷಿನೆಲ್ ಹೆನ್ರಿ (28;14ಎ) ಹೊರತುಪಡಿಸಿ ಉಳಿದವರು ಬೇಗನೆ ನಿರ್ಗಮಿಸಿದರು. ವೇಗಿ ಕಶ್ವಿ ಗೌತಮ್ (11ಕ್ಕೆ 3), ತನುಜಾ ಕನ್ವರ್ (17ಕ್ಕೆ 3) ತಲಾ 3 ವಿಕೆಟ್ ಪಡೆದು ಮಿಂಚಿದರು.
ಮೂನಿ ಅಬ್ಬರ: ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿಯೇ ಷಿನೆಲ್ ಹೆನ್ರಿ ಅವರ ಎಸೆತದಲ್ಲಿ ಹೇಮಲತಾ ದಯಾಳನ್ (2) ಅವರು ಔಟಾದರು. ಆದರೆ, ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಮೂನಿ ಮತ್ತು ಹರ್ಲಿನ್ ಡಿಯೊಲ್ (45; 32ಎಸೆತ) ಎರಡನೇ ವಿಕೆಟ್ ಜೊತೆಯಾಟದಲ್ಲಿ 101 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್ : 20 ಓವರ್‌ಗಳಲ್ಲಿ 5ಕ್ಕೆ186 (ಬೆತ್ ಮೂನಿ ಔಟಾಗದೇ 96, ಹರ್ಲೀನ್ ಡಿಯೊಲ್ 45, ಸೋಫಿ ಎಕ್ಲೆಸ್ಟೋನ್ 34ಕ್ಕೆ2.
ಯು.ಪಿ ವಾರಿಯರ್ಸ್: 17.1 ಓವರ್‌ಗಳಲ್ಲಿ 105 (ಗ್ರೇಸ್ ಹ್ಯಾರಿಸ್ 25, ಷಿನೆಲ್ ಹೆನ್ರಿ 28; ಕಶ್ವಿ ಗೌತಮ್ 11ಕ್ಕೆ 3, ತನುಜಾ ಕನ್ವರ್ 17ಕ್ಕೆ 3, ದಿಯಾಂದ್ರ ಡಾಟಿನ್ 14ಕ್ಕೆ 2). ಫಲಿತಾಂಶ: ಗುಜರಾತ್ ಜೈಂಟ್ಸ್‌ಗೆ 81 ರನ್ ಜಯ. ಪಂದ್ಯದ ಆಟಗಾರ್ತಿ: ಬೆತ್ ಮೂನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.