ಲಂಡನ್: ಗಾಯಾಳಾಗಿರುವ ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ಅವರು ಭಾರತ ವಿರುದ್ಧ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದ ವೇಳೆಗೆ ಆಯ್ಕೆಗೆ ಲಭ್ಯರಾಗುವ ವಿಶ್ವಾಸ ಹೊಂದಿದ್ದಾರೆ. ಈ ಟೆಸ್ಟ್ ಓವಲ್‌ನಲ್ಲಿ ಜುಲೈ 31ರಂದು ಆರಂಭವಾಗಲಿದೆ.
ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವುಡ್ ಈಗ ಚೇತರಿಕೆಯ ಹಾದಿಯಲ್ಲಿದ್ದು, ಪುನಶ್ಚೇತನ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ವೇಳೆ ಅವರು ಮೊಣಕಾಲಿನ ನೋವಿಗೆ ಒಳಗಾಗಿದ್ದರು.
ವೈದ್ಯರು ಅವರಿಗೆ ನಾಲ್ಕು ತಿಂಗಳ ವಿಶ್ರಾಂತಿಗೆ ಸೂಚಿಸಿದ್ದರೂ, ಐದನೇ ಟೆಸ್ಟ್ ವೇಳೆಗೆ ಲಭ್ಯರಾಗುವ ವಿಶ್ವಾಸವನ್ನು ವುಡ್ ವ್ಯಕ್ತಪಡಿಸಿದ್ದಾರೆ. ‘ಪುನಶ್ಚೇತನ ನಡೆಯುತ್ತಿದೆ. ಈಗ ಸಣ್ಣ ಮಟ್ಟದಲ್ಲಿ ಬೌಲಿಂಗ್ ಅಭ್ಯಾಸ ಶುರುಮಾಡಿದ್ದೇನೆ’ ಎಂದು 35 ವರ್ಷ ವಯಸ್ಸಿನ ವುಡ್ ಬಿಬಿಸಿ ಟೆಸ್ಟ್ ಮ್ಯಾಚ್ ಸ್ಪೆಷಲ್‌ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.