ADVERTISEMENT

ಟೀಂ ಇಂಡಿಯಾ ಎದುರು ಕುಸಿದ ಪಾಕಿಸ್ತಾನ; ಭಾರತಕ್ಕೆ 89 ರನ್‌ಗಳ ಗೆಲುವು

ವಿಶ್ವಕಪ್ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 18:47 IST
Last Updated 16 ಜೂನ್ 2019, 18:47 IST
   

ಮ್ಯಾಂಚೆಸ್ಟರ್‌: ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳ ಆಟಕ್ಕೆ ಕಡಿವಾಣ ಹಾಕುವಲ್ಲಿ ಭಾರತ ಬೌಲರ್‌ಗಳು ಬಹುಬೇಗ ಸಫಲರಾದರು. ಟೀಂ ಇಂಡಿಯಾ 89ರನ್‌ಗಳ ಭರ್ಜರಿ ಜಯ ಗಳಿಸಿತು.

ಪಾಕಿಸ್ತಾನ ತಂಡ 129 ರನ್‌ ದಾಟುವ ಮುನ್ನವೇ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.35 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 166 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಎದುರಾಯಿತು. ಆಗಶದಾಬ್‌ ಖಾನ್‌(20) ಮತ್ತು ಇಮದ್‌ ವಾಸಿಂ(46) ಕಣದಲ್ಲಿದ್ದರು. ಮಳೆ ನಿಂತ ಬಳಿಕಡಕ್ವರ್ತ್‌ ಲೂಯಿಸ್ ನಿಯಮದ ಅನ್ವಯಪಾಕಿಸ್ತಾನದ ಗೆಲುವಿಗೆ 30 ಎಸೆತಗಳಲ್ಲಿ136 ರನ್‌ ಗುರಿ ನೀಡಲಾಯಿತು. ಕನಿಷ್ಠ ಎಸೆತಗಳಲ್ಲಿ ದಾಖಲಿಸಬೇಕಾದಗರಿಷ್ಠ ಮೊತ್ತವನ್ನು ಪಾಕಿಸ್ತಾನ ಪೂರೈಸಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನ 40 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212ರನ್‌ ಗಳಿಸಿತು.

ADVERTISEMENT

ಕ್ಷಣಕ್ಷಣದ ಸ್ಕೋರ್‌:https://bit.ly/2X9OQP1

ಭಾನುವಾರ ಭಾರತ–ಪಾಕಿಸ್ತಾನ ನಡುವಿನ ಪಂಧ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 337 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಭಾರತದ ಗುರಿ ಬೆನ್ನೇರಿದ ಪಾಕಿಸ್ತಾನ ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ದಿಟ್ಟ ಹೋರಾಟ ಕಾಣಲಿಲ್ಲ.

ನಾಲ್ಕನೇ ಓವರ್‌ ಮಧ್ಯದಲ್ಲಿಯೇ ಭುವನೇಶ್ವರ ಕುಮಾರ್‌ ಗಾಯದ ಸಮಸ್ಯೆಯಿಂದ ಹೊರ ನಡೆದರು. ಓವರ್‌ ಪೂರ್ಣಗೊಳಿಸಲು ಬಂದ ವಿಜಯ ಕುಮಾರ್ ತನ್ನ ಮೊದಲ ಎಸೆತದಲ್ಲಿಯೇ ಇಮಾನ್‌ ಉಲ್‌ ಹಕ್‌ ವಿಕೆಟ್‌ ಪಡೆದರು. ಕೇವಲ 13ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡ ತಂಡಕ್ಕೆ ಫಕ್ರ ಜಮಾನ್‌(62) ಮತ್ತು ಬಾಬರ್ ಅಜಂ(48) ಜತೆಯಾಟ ಆಸರೆಯಾಯಿತು.

ಇಬ್ಬರ ಶತಕದ ಜತೆಯಾಟ ಭಾರತ ತಂಡದ ಮೇಲೆ ಒತ್ತಡ ಹೆಚ್ಚಿಸಿತು. 23ನೇ ಓವರ್‌ನ ಕೊನೆಯ ಎಸೆತದಲ್ಲಿ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌, ಬಾಬರ್‌ ಅಜಂ ವಿಕೆಟ್ ಕಬಳಿಸುವ ಮೂಲಕ ಜತೆಯಾಟ ಕೊನೆಯಾಗಿಸಿದರು. ಮತ್ತೆ ಕುಲದೀಪ್‌ ಓವರ್‌ನಲ್ಲಿಯೇ ಫಕ್ರ ಜಮಾನ್‌ ಕ್ಯಾಚ್‌ ನೀಡಿದರು. ಇದರೊಂದಿಗೆ ಪಾಕಿಸ್ತಾನದ ಗೆಲುವಿನ ಸಾಧ್ಯತೆ ಅರ್ಧಕ್ಕೆ ಕುಸಿಯಿತು.

25.2 ಓವರ್‌ಗಳಲ್ಲಿ 126 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಪಾಕಿಸ್ತಾನ, ಮುಂದಿನ 3 ರನ್‌ ಅಂತದಲ್ಲಿ ಎರಡು ವಿಕೆಟ್‌ ನಷ್ಟ ಅನುಭವಿಸಿತು. ತಂಡದ ನಾಯಕ ಸರ್ಫರಾಜ್‌ ಅಹಮದ್‌(12) ವಿಕೆಟ್‌ ಉರುಳುವುದಕ್ಕೂ ಮುನ್ನವೇ ಶೋಯಬ್‌ ಮಲ್ಲಿಕ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರು.

ಹಾರ್ದಿಕ್‌ ಪಾಂಡ್ಯಾ, ವಿಜಯ ಶಂಕರ್‌ ಹಾಗೂ ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಗಳಿಸಿದರು.

ಪಂದ್ಯ ಶ್ರೇಷ್ಠ: ರೋಹಿತ್‌ ಶರ್ಮಾ(140 ರನ್‌)

ಮೊದಲ ಬ್ಯಾಟ್‌ ಮಾಡಿದ ಭಾರತದ ಪರಆರಂಭಿಕರಾಗಿ ಕಣಕ್ಕಿಳಿದಕೆ.ಎಲ್‌.ರಾಹುಲ್‌(57) ಅರ್ಧ ಶತಕ ಪೂರೈಸಿ ವಿಕೆಟ್‌ ಒಪ್ಪಿಸಿದರು.ಭಾರತದ ಬ್ಯಾಟಿಂಗ್‌ ಬಲವನ್ನು ನಿಯಂತ್ರಿಸಲು ಪಾಕ್‌ ಬೌಲರ್‌ಗಳು ಹಲವು ತಂತ್ರಗಳನ್ನು ಬಳಸಿದರು.ಆದರೆ, ರೋಹಿತ್‌ ಶರ್ಮಾ ಆಗಾಗ್ಗೆ ಚೆಂಡನ್ನು ಬೌಂಡರಿಗೆ ಸೇರಿಸುವ ಮೂಲಕ ದಿಟ್ಟ ಉತ್ತರ ನೀಡಿದರು.ರೋಹಿತ್‌ 140 ರನ್‌ ಗಳಿಸಿದ್ದಾಗ ಹಸನ್‌ ಅಲಿ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಆಟ ಮುಗಿಸಿದರು. ಅವರುಒಟ್ಟು3ಸಿಕ್ಸರ್‌ ಹಾಗೂ 14ಬೌಂಡರಿ ಸಿಡಿಸಿದರು.

ಆಟ ಮುಂದುವರಿಸಿದ ವಿರಾಟ್‌ ಕೊಹ್ಲಿ(77) ಮೊಹಮ್ಮದ್‌ ಅಮೀರ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ವಿಜಯ್‌ ಶಂಕರ್‌(15) ಮತ್ತು ಕೇದಾರ್‌ ಜಾದವ್‌(9) ಅಂತಿಮ ಆಟ ನಡೆಸಿದರು. ಇದಕ್ಕೂ ಮುನ್ನಹಾರ್ದಿಕ್‌ ಪಾಂಡ್ಯ 19 ಎಸೆತಗಳಲ್ಲಿ 26 ರನ್‌ ಗಳಿಸಿದರು. ಮಹೇಂದ್ರ ಸಿಂಗ್‌ ಧೋನಿ ಕೇವಲ 1 ರನ್‌ಗಳಿಗೆ ಹೊರ ನಡೆದರು.

ಪಾಕಿಸ್ತಾನ ಪರ ಮೊಹಮ್ಮದ್‌ ಅಮೀರ್10ಓವರ್‌ಗಳಲ್ಲಿ 47ರನ್‌ ನೀಡಿ 3ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.