ADVERTISEMENT

ಬೂಮ್ರಾ ಮ್ಯಾಜಿಕ್‌, ಅಫ್ಗಾನ್‌ ತಾಳ್ಮೆಯ ಆಟ; ಸನಿಹದಲ್ಲಿ ಸೋಲು–ಗೆಲುವು

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 16:48 IST
Last Updated 22 ಜೂನ್ 2019, 16:48 IST
   

ಸೌತಾಂಪ್ಟನ್: ಭಾರತ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನೇರಿದ ಅಫ್ಗಾನಿಸ್ತಾನ ಉತ್ತಮ ಜತೆಯಾಟದ ಮೂಲಕ ಗೆಲುವು ಸಾಧಿಸುವ ನಿರೀಕ್ಷೆ ಸೃಷ್ಟಿಸಿತು. ಜಸ್‌ಪ್ರೀತ್‌ ಬೂಮ್ರಾ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ ಕಬಳಿಸುವ ಮೂಲಕ ಪಂದ್ಯವನ್ನು ಭಾರತದ ಕಡೆಗೆತಿರುಗಿಸಿದರು.

ಅಫ್ಗಾನಿಸ್ತಾನ 42ಓವರ್‌ಗಳಲ್ಲಿ 6ವಿಕೆಟ್‌ ನಷ್ಟಕ್ಕೆ 167ರನ್‌ ಗಳಿಸಿದೆ.ಮೊಹಮ್ಮದ್‌ ನಬಿ(27)ಮತ್ತು ರಶೀದ್‌ ಖಾನ್‌(1) ಆಟ ಮುಂದುವರಿಸಿದ್ದಾರೆ.

ಕ್ಷಣಕ್ಷಣದ ಸ್ಕೋರ್‌:https://bit.ly/2x8gywP

ADVERTISEMENT

ಗುಲ್ಬದಿನ್‌ ನೈಬ್‌(27), ರಹಮತ್‌ ಷಾ(36) ಹಾಗೂ ಹಸ್ಮತುಲ್ಲಾ ಶಾಹಿದಿ(21) ತೋರಿದ ತಾಳ್ಮೆಯ ಪ್ರದರ್ಶನದಿಂದ ತಂಡ 100 ರನ್‌ ಗಡಿ ದಾಟಲು ಸಾಧ್ಯವಾಯಿತು. ಉತ್ತಮ ಪ್ರರ್ದಶನ ನೀಡುತ್ತಿದ್ದನಜಿಬುಲ್ಲಾ ಜದ್ರಾನ್‌(21), ಹಾರ್ದಿಕ್‌ ಪಾಂಡ್ಯ ಎಸೆತದಲ್ಲಿ ಕ್ಯಾಚ್‌ ನೀಡಿದರು.

ಅಫ್ಗನ್‌ 20 ರನ್‌ ಗಳಿಸಿದ್ದಾಗ ಮೊಹಮ್ಮದ್‌ ಶಮಿ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಹಝರನ್‌ ಝಜಲ್‌(10) ವಿಕೆಟ್‌ ಒಪ್ಪಿಸಿದರು. ರಹಮತ್‌ ಮತ್ತು ಹಸ್ಮತುಲ್ಲಾ ಜತೆಯಾಟದಿಂದಾಗಿ ನೂರರ ಗಡಿದಾಟಿದ್ದ ತಂಡಕ್ಕೆ ಬೂಮ್ರಾ ಕಡಿವಾಣ ಹಾಕಿದರು. 28 ಓವರ್‌ನಲ್ಲಿ ಯಾವುದೇ ರನ್‌ ನೀಡದೆ ಎರಡು ವಿಕೆಟ್‌ ಉರುಳಿಸುವ ಮೂಲಕ ಅಫ್ಗನ್‌ಗೆ ಆಘಾತ ನೀಡಿದರು. ಚಾಹಲ್‌ ಸ್ಪಿನ್‌ ಮೋಡಿಗೆಅಸ್ಘರ್‌ ಅಫ್ಗರ್‌(8) ವಿಕೆಟ್‌ ಒಪ್ಪಿಸಿದರು.

ಬೂಮ್ರಾ ಮತ್ತು ಹಾರ್ದಿಕ್‌ ಪಾಂಡ್ಯತಲಾ 2 ವಿಕೆಟ್‌, ಮೊಹಮ್ಮದ್‌ ಶಮಿ, ಚಾಹಲ್‌ ತಲಾ 1 ವಿಕೆಟ್‌ ಪಡೆದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಭಾರತ ತಂಡನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 224 ರನ್‌ ಗಳಿಸಿತು. ನಾಯಕ ವಿರಾಟ್‌ ಕೊಹ್ಲಿ(67) ಮತ್ತು ಕೇದಾರ್‌ ಜಾಧವ್‌(52) ಅರ್ಧ ಶತಕದ ನೆರವಿನಿಂದ ತಂಡ 200 ರನ್‌ ಗಡಿ ದಾಟಿತು.

ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್‌.ರಾಹುಲ್‌(30 ರನ್‌; 2 ಬೌಂಡರಿ), ಮೊಹಮ್ಮದ್‌ ನಬಿ ಎಸೆತದಲ್ಲಿ ಸಾಹಸಮಯ ಹೊಡೆತಕ್ಕೆ ಮುಂದಾಗಿ ಕ್ಯಾಚ್‌ ನೀಡಿದರು.10 ಎಸೆತಗಳಲ್ಲಿ 1 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ,ಮುಝೀಬ್‌ ಉರ್‌ ರಹಮಾನ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ವಿಜಯ್‌ ಶಂಕರ್‌ (21 ರನ್‌) ಮತ್ತುಮಹೇಂದ್ರ ಸಿಂಗ್‌ ಧೋನಿ(28) ತಾಳ್ಮೆಯ ಆಟ ಆಡಿದರು.

ರನ್‌ ಹರಿಯುವಿಕೆಗೆ ಅಫ್ಗಾನ್‌ ಸ್ಪಿನ್ನರ್‌ಗಳು ತಡೆಯಾದರು. ಮೊಹಮ್ಮದ್‌ ನಬಿ ಮತ್ತು ಗುಲ್ಬದೀನ್‌ ನೈಬ್‌ 2 ವಿಕೆಟ್‌, ರಹಮಾನ್‌, ರಹಮತ್ ಷಾ, ಅಫ್ತಬ್ ಆಲಂ ಹಾಗೂ ರಶೀದ್‌ ಖಾನ್‌ ತಲಾ ಒಂದು ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.