ADVERTISEMENT

ಇಂಗ್ಲೆಂಡ್‌ ಹಿಡಿತಕ್ಕೆ ಸಿಲುಕಿ ಜಾರಿದ ಕಾಂಗರೂ ಪಡೆ;ಪಿಂಚ್‌ ಶತಕ, 286 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 13:29 IST
Last Updated 25 ಜೂನ್ 2019, 13:29 IST
   

ಲಂಡನ್‌:ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಆತಿಥೇಯ ಇಂಗ್ಲೆಂಡ್‌ ತಂಡ ಆರಂಭದಲ್ಲಿಯೇ ಕಾಂಗರೂ ಬ್ಯಾಟ್ಸ್‌ಮನ್‌ ಗಳನ್ನು ಕಟ್ಟಿ ಹಾಕುವಲ್ಲಿ ವಿಫಲರಾದರು. ನಿಧಾನಗತಿ ಆರಂಭ ಕಂಡರೂ ಫಿಂಚ್‌ ಮತ್ತು ಮಾರ್ನರ್‌ ಜೋಡಿ ತಂಡದ ರನ್‌ ಗಳಿಕೆಗೆ ಭದ್ರ ಬುನಾದಿ ಹಾಕಿಕೊಟ್ಟರು.

ನಿಗದಿತ 50 ಓವರ್‌ಗಳಲ್ಲಿ ಆಸ್ಟ್ರೇಲಿಯಾ 7ವಿಕೆಟ್‌ ನಷ್ಟಕ್ಕೆ 285ರನ್‌ ಗಳಿಸಿತು. ನಾಯಕ ಆ್ಯರನ್‌ ಫಿಂಚ್‌ ಸಿಡಿಸಿದ ಶತಕ ಮತ್ತು ಡೇವಿಡ್‌ ವಾರ್ನರ್‌ ಅವರ ಅರ್ಧ ಶತಕದ ನೆರವಿನಿಂದ ತಂಡ ಉತ್ತಮ ರನ್‌ ಕಲೆಹಾಕಲು ಸಾಧ್ಯವಾಯಿತು.

ಕ್ಷಣಕ್ಷಣದಸ್ಕೋರ್‌ಗಾಗಿ:https://bit.ly/2ILnE13

ADVERTISEMENT

115 ಎಸೆತಗಳನ್ನು ಎದುರಿಸಿದ ಫಿಂಚ್‌, 2 ಸಿಕ್ಸರ್ ಹಾಗೂ 11 ಬೌಂಡರಿ ಒಳಗೊಂಡ ಶತಕ ಪೂರೈಸಿದರು. 35ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್‌ ಎಸೆತದಲ್ಲಿ ಫಿಂಚ್‌ ಕ್ಯಾಚ್‌ ನೀಡಿ ಆಟ ಮುಗಿಸಿದರು. ಇದಕ್ಕೂ ಮುನ್ನ ವಾರ್ನರ್‌(53), ಉಸ್ಮಾನ್‌ ಖವಾಜಾ(23) ವಿಕೆಟ್‌ ಒಪ್ಪಿಸಿದರು.

ಬಿರುಸಿನ ಆಟ ಪ್ರದರ್ಶಿಸುತ್ತಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌(12) ಬಹುಬೇಗ ವಿಕೆಟ್ ಕಳೆದುಕೊಂಡರು. ಮಧ್ಯ ಕ್ರಮಾಂಕದಲ್ಲಿ ಮಿಂಚಿದ ಸ್ಟೀವ್‌ ಸ್ಮಿತ್‌ 38 ರನ್‌ ಗಳಿಸಿ ಕ್ರಿಸ್‌ ವೋಕ್ಸ್‌ಗೆ ಎಸೆತದಲ್ಲಿ ಆಟ ಮುಗಿಸಿದರು. ನಾಲ್ಕು ವಿಕೆಟ್‌ ಉರುಳುತ್ತಿದ್ದಂತೆ ತಂಡ ತಾಳ್ಮೆಯ ಆಟಕ್ಕೆ ಮುಂದಾಯಿತು.

ಏಳನೇ ಕ್ರಮಾಂಕದಲ್ಲಿ ಆಡಿದ ಅಲೆಕ್ಸ್‌ ಕ್ಯಾರಿ, 26 ಎಸೆತಗಳಲ್ಲಿ 38ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಲು ನೆರವಾದರು.

ಇಂಗ್ಲೆಂಡ್‌ ಪರ, ಕ್ರಿಸ್‌ ವೋಕ್ಸ್‌ 2 ವಿಕೆಟ್‌, ಜೋಫ್ರ ಆರ್ಚರ್‌, ಮಾರ್ಕ್‌ ವುಡ್‌, ಬೆನ್‌ ಸ್ಟೋಕ್ಸ್‌ ಹಾಗೂ ಮೊಯೀನ್‌ ಅಲಿ ತಲಾ 1 ವಿಕೆಟ್‌ ಪಡೆದರು.

ಶ್ರೀಲಂಕಾ ವಿರುದ್ಧ ಅನಿರೀಕ್ಷಿತ ಸೋಲಿನಿಂದ ಆಘಾತ ಅನುಭವಿಸಿರುವ ಆತಿಥೇಯರು ಈ ಪಂದ್ಯದ ಮೂಲಕ ಗೆಲುವಿನ ಹಳಿಗೆ ಮರಳಲು ಕಾತರರಾಗಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.