ADVERTISEMENT

ಕಾಂಗರೂ ಪಡೆಗೆ ಸ್ಮಿತ್‌ ಆಸರೆ, ಇಂಗ್ಲೆಂಡ್‌ ಗೆಲುವಿಗೆ 224 ರನ್ ಗುರಿ

ವಿಶ್ವಕಪ್‌ ಕ್ರಿಕೆಟ್‌: ಆಸ್ಟ್ರೇಲಿಯಾ–ಇಂಗ್ಲೆಂಡ್‌ ಪಂದ್ಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 14:11 IST
Last Updated 11 ಜುಲೈ 2019, 14:11 IST
   

ಬರ್ಮಿಂಗಹ್ಯಾಂ: ಫೈನಲ್‌ ಪ್ರವೇಶದ ಕೊನೆಯ ಹಂತದಲ್ಲಿ ಆತಿಥೇಯ ಇಂಗ್ಲೆಂಡ್‌ ಮತ್ತು ಕಳೆದ ವಿಶ್ವಕಪ್‌ ಚಾಂಪಿಯನ್ ಕಾಂಗರೂ ಪಡೆ ನಡುವೆ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಹಣಾಹಣಿ ನಡೆದಿದೆ. ಟಾಸ್‌ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಕ್ರಿಸ್‌ ವೋಕ್ಸ್‌ ಮತ್ತು ಜೋಫ್ರಾ ಆರ್ಚರ್‌ ಬೌಲಿಂಗ್‌ ದಾಳಿಗೆ ಕಾಂಗರೂ ಪಡೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ಒಬ್ಬರಿಂದೊಬ್ಬರು ಹೊರನಡೆದರು.

ಆಸ್ಟ್ರೇಲಿಯಾ 49ಓವರ್‌ಗಳಲ್ಲಿ ಎಲ್ಲವಿಕೆಟ್‌ ಕಳೆದುಕೊಂಡು223ರನ್‌ ಗಳಿಸಿತು. ಆರಂಭಿಕ ಆಘಾತದಿಂದ ಸಂಕಷ್ಟದಲ್ಲಿದ್ದ ತಂಡಕ್ಕೆಅಲೆಕ್ಸ್ ಕ್ಯಾರಿ(46)ಮತ್ತು ಸ್ಟೀವ್‌ ಸ್ಮಿತ್‌ಜತೆಯಾಟ ಆಸರೆಯಾಯಿತು. ಮಧ್ಯಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಆದಿಲ್‌ ರಶೀದ್‌ ದುಸ್ವಪ್ನದಂತೆ ಕಾಡಿದರು. ಪ್ರಮುಖ 3 ವಿಕೆಟ್‌ ಉರುಳಿಸುವ ಮೂಲಕ ಬ್ಯಾಟಿಂಗ್‌ ಪಡೆಯ ಮೇಲೆ ನಿಯಂತ್ರಣ ಹೇರಿದರು.ಅರ್ಧ ಶತಕ ಪೂರೈಸಿರುವ ಸ್ಮಿತ್‌(85) ತಾಳ್ಮೆಯ ಹೋರಾಟದಿಂದಾಗಿ ತಂಡ 200 ರನ್‌ ಗಡಿದಾಟಲು ಸಾಧ್ಯವಾಯಿತು.

ಕ್ಷಣಕ್ಷಣದ ಸ್ಕೋರ್‌:https://bit.ly/2XDjj3T

ADVERTISEMENT

ತಂಡಕ್ಕೆ ಆಸೆಯಾಗಿದ್ದಸ್ಟೀವ್‌ ಸ್ಮಿತ್‌ ರನ್‌ ಔಟ್‌ ನಿನ್ನೆಯ ಭಾರತ–ನ್ಯೂಜಿಲೆಂಡ್‌ ಪಂದ್ಯವನ್ನು ನೆನಪಿಸಿತು.ಜಾಸ್‌ ಬಟ್ಲರ್ ಎಸೆದಚೆಂಡು ವಿಕೆಟ್‌ನ ಗುರಿಯಿಂದ ತಪ್ಪಲಿಲ್ಲ, 47ನೇ ಓವರ್‌ನಲ್ಲಿ ಸ್ಮಿತ್‌ ಹೊರನಡೆದರು. ಅಂತಿಮ ಘಟ್ಟದಲ್ಲಿ ಧೋನಿ ಸಹ ಇಂಥದ್ದೇ ನೇರ ಎಸೆತದಿಂದ ವಿಕೆಟ್‌ ಕಳೆದುಕೊಂಡಿದ್ದರು.

ನಾಯಕ ಆ್ಯರನ್‌ ಫಿಂಚ್‌ ಖಾತೆ ತೆರೆಯುವ ಮುನ್ನವೇ ಜೋಫ್ರಾ ಆರ್ಚರ್‌ ದಾಳಿಗೆ ಶೂನ್ಯ ಸಾಧನೆಯೊಂದಿಗೆ ಹೊರನಡೆದರು. ಆರ್ಚರ್‌ ತನ್ನ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಫಿಂಚ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಹೊಸದಾಖಲೆಗಳನ್ನು ನಿರ್ಮಿಸುವ ಹೊಸ್ತಿಲಲ್ಲಿದ್ದ ಡೇವಿಡ್‌ ವಾರ್ನರ್‌, ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ಕ್ಯಾಚ್‌ ನೀಡಿ ಆಟ ಮುಗಿಸಿದರು. ಎರಡು ಬೌಂಡರಿ ಸಿಡಿಸಿ ಮತ್ತೊಂದು ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದ ವಾರ್ನರ್‌ ಅತ್ಯಂತ ಪ್ರಮುಖ ಪಂದ್ಯದಲ್ಲಿ ಮಿಂಚದೆ ಹೊರ ನಡೆದರು.

ಪಂದ್ಯದ ಆರನೇ ಓವರ್‌ನಲ್ಲಿ ದಾಳಿ ಮುಂದುವರಿಸಿದವೋಕ್ಸ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌ವಿಕೆಟ್‌ ಕಬಳಿಸುವಲ್ಲಿ ಸಫಲರಾದರು. ತಂಡ 14 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತು. ಸ್ಮಿತ್‌ ಮತ್ತು ಕ್ಯಾರಿ ಉತ್ತಮ ಜತೆಯಾಟದ ನೆರವಿನಿಂದ ತಂಡ 100 ರನ್‌ ಗಡಿ ದಾಟಿತು. 4 ಬೌಂಡರಿ ಸಹಿತ 70 ಎಸೆತಗಳಲ್ಲಿ 46 ರನ್‌ ಗಳಿಸಿದ್ದ ಕ್ಯಾರಿ ಸ್ಪಿನ್ನರ್‌ ಆದಿಲ್‌ ರಶೀದ್‌ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಅದೇ ಓವರ್‌ನಲ್ಲಿ ಮಾರ್ಕಸ್‌ ಸ್ಟೋನಿಸ್‌ ಸಹ ರನ್‌ ಖಾತೆ ತೆರೆಯದೆಯೇಪೆವಿಲಿಯನ್‌ ಹಾದಿ ಹಿಡಿದರು.

ಬಿರುಸಿನ ಆಟ ಆಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡದ ರನ್‌ ಗಳಿಕೆಯಲ್ಲಿ ನೆರವಾದರೆ, ಸಿಕ್ಸರ್‌ ಮತ್ತು 2 ಬೌಂಡರಿ ಸಹಿತ 22 ರನ್‌ ಬಾರಿಸಿದ್ದ ಅವರಿಗೆಜೋಫ್ರಾ ಆರ್ಚರ್‌ ಕಡಿವಾಣ ಹಾಕಿದರು. 9ನೇ ಕ್ರಮಾಂಕದಲ್ಲಿಮಿಷೆಲ್‌ ಸ್ಟಾರ್ಕ್(29) ಹೋರಾಟವು ನೆರವಾಯಿತು.

ಆದಿಲ್‌ ರಶೀದ್‌ ಮತ್ತು ಕ್ರಿಸ್‌ ವೋಕ್ಸ್‌ ತಲಾ3 ವಿಕೆಟ್‌,ಜೋಫ್ರಾ ಆರ್ಚರ್‌2 ಹಾಗೂ ಮಾರ್ಕ್‌ ವುಡ್‌ 1 ವಿಕೆಟ್‌ಕಬಳಿಸಿದರು.

ಗಾಯಗೊಂಡಿರುವ ಆಸ್ಟ್ರೇಲಿಯಾದ ಉಸ್ಮಾನ್‌ ಖ್ವಾಜಾ ಬದಲು ಪೀಟರ್‌ ಹ್ಯಾಂಡ್ಸ್‌ಕಾಂಬ್‌ಗೆ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಬುಧವಾರ ಸೆಮಿಫೈನಲ್‌ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ವೀರೋಚಿತ ಸೋಲು ಕಂಡಿತು. ಮಳೆಯ ಕಾರಣದಿಂದ ಎರಡು ದಿನ ನಡೆದ ಪಂದ್ಯದ ಫಲಿತಾಂಶಭಾರತದ ಕ್ರಿಕೆಟ್‌ ಪ್ರಿಯರ ಪಾಲಿಗೆ ನಿರಾಶೆ ಮೂಡಿಸಿತು. ಭಾರತದ ಪ್ರಮುಖ 3 ವಿಕೆಟ್‌ಗಳು ಬಹುಬೇಗ ಉರುಳುವ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತು. ಇಂಥದ್ದೇ ಸ್ಥಿತಿಯಲ್ಲಿ ಆಸ್ಟ್ರೇಲಿಯಾ ಸಹ ಸಿಲುಕಿದೆ.

2015ರ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವು ಗುಂಪು ಹಂತದಲ್ಲಿಯೇ ಹೊರಬಿದ್ದಿತ್ತು. ಆದರೆ 1979. 1987 ಮತ್ತು 1992 ರಲ್ಲಿ ಫೈನಲ್ ತಲುಪಿದ್ದ ತಂಡವು ನಿರಾಸೆ ಅನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.