ADVERTISEMENT

ರೋಹಿತ್‌ ಶತಕ ದಾಖಲೆ, ಭಾರತ ಭರ್ಜರಿ ಬ್ಯಾಟಿಂಗ್‌; ಬಾಂಗ್ಲಾಗೆ 315 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 14:14 IST
Last Updated 2 ಜುಲೈ 2019, 14:14 IST
   

ಬರ್ಮಿಂಗಂ: ಎಜ್‌ಬಾಸ್ಟನ್‌ ಮೈದಾನದಲ್ಲಿ ಮಂಗಳವಾರ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ, ರಾಹುಲ್‌ ಮತ್ತು ರೋಹಿತ್‌ ಭರ್ಜರಿ ಜತೆಯಾಟ ನೆರವಿನಿಂದ ಉತ್ತಮಮೊತ್ತ ದಾಖಲಿಸಿತು. ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ರೋಹಿತ್‌ ಅತ್ಯಧಿಕ ರನ್‌ ಕಲೆ ಹಾಕಿದರು.ಉತ್ತಮ ಬೌಲಿಂಗ್‌ ಮಾಡಿದಮುಸ್ತಫಿಜರ್‌ 5 ವಿಕೆಟ್‌ ಸಾಧನೆ ಮಾಡಿದರು.

ಟೀಂ ಇಂಡಿಯಾ ನಿಗದಿತ 50ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ 314ರನ್‌ ಗಳಿಸಿತು. ಉತ್ತಮ ರನ್‌ ರೇಟ್‌ ಹೊಂದಿದ್ದ ತಂಡಕ್ಕೆ 38ನೇ ಓವರ್‌ನಲ್ಲಿ ಮುಸ್ತಫಿಜರ್‌ ಕೊಹ್ಲಿ ಮತ್ತು ಪಾಂಡ್ಯ ವಿಕೆಟ್‌ ಪಡೆಯುವ ಮೂಲಕ ಒತ್ತಡ ಸೃಷ್ಟಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಅದಾಗಲೇ ಲಯ ಕಂಡುಕೊಂಡಿದ್ದ ರಿಷಬ್‌ ಪಂತ್‌(48; 41 ಎಸೆತ, 6 ಬೌಂಡರಿ,1 ಸಿಕ್ಸರ್‌) ಬಿರುಸಿನ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಮಹೇಂದ್ರ ಸಿಂಗ್‌ ಧೋನಿ(15) ಮತ್ತು ದಿನೇಶ್‌ ಕಾರ್ತಿಕ್‌ ಕಣದಲ್ಲಿದ್ದಾರೆ.

ಕ್ಷಣಕ್ಷಣದ ಸ್ಕೋರ್‌: https://bit.ly/2JjpaXa

ADVERTISEMENT

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಐದು ಸಿಕ್ಸರ್‌ಗಳ ಸಹಿತ90ಎಸೆತಗಳಲ್ಲಿ ಶತಕ ಪೂರೈಸಿದರು. ಇದು ವಿಶ್ವಕಪ್‌ನಲ್ಲಿ ರೋಹಿತ್‌ ನಿರ್ಮಿಸಿದ ನಾಲ್ಕನೇ ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 26ನೇ ಶತಕವಾಗಿದೆ.

ಉತ್ತಮ ಆಟವಾಡಿದ ಕೆ.ಎಲ್‌.ರಾಹುಲ್‌(77) ಮತ್ತು ರೋಹಿತ್‌ ಶರ್ಮಾ(104) ತಂಡದ ರನ್‌ ಗಳಿಕೆಗೆ ಭದ್ರ ಬುನಾದಿ ಹಾಕಿದರು. ಈ ಜೋಡಿ ಒಟ್ಟು6 ಸಿಕ್ಸರ್‌ ಹಾಗೂ 13ಬೌಂಡರಿ ಸಿಡಿಸಿತು.ನಾಲ್ಕನೇ ಓವರ್‌ನಲ್ಲಿ ರೋಹಿತ್‌ ಹೊಡೆತವನ್ನು ಹಿಡಿಯಲುವಲ್ಲಿ ತಮೀಮ್‌ ಇಕ್ಬಾಲ್‌ ವಿಫಲರಾದುದು ಬಾಂಗ್ಲಾ ಪಾಲಿಗೆ ಅಪಾಯಕಾರಿಯಾಯಿತು. ಸೌಮ್ಯಾ ಸರ್ಕಾರ್‌ ಎಸೆತದಲ್ಲಿ ರೋಹಿತ್‌ ಶರ್ಮಾ ಕ್ಯಾಚ್‌ ನೀಡಿ ಆಟ ಮುಗಿಸಿದರು. ರೋಹಿತ್‌ ಹಾದಿಯಲ್ಲೇ ರಾಹುಲ್‌ ಅವರೂ ಸೌಮ್ಯ ಸರ್ಕಾರ್‌ ಬೌಲಿಂಗ್‌ನಲ್ಲೇ ವಿಕೆಟ್‌ ಕೀಪರ್‌ ಲಿಟನ್‌ ದಾಸ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಭಾರೀ ಹೊಡೆತಗಳಿಗೆ ಮುಂದಾದವಿರಾಟ್‌ ಕೊಹ್ಲಿ(26) ಮುಸ್ತಫಿಜರ್ ರೆಹಮಾನ್‌ ಎಸೆತದಲ್ಲಿ ಕ್ಯಾಚ್‌ ನೀಡಿದರು. ಅದೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಕೂಡ ವಿಕೆಟ್‌ ಒಪ್ಪಿಸಿದರು. ಉತ್ತಮ ಸ್ಕೋರ್‌ ದಾಖಲಿಸಿದ್ದ ಭಾರತ ತಂಡ್ಕಕೆ ಮುಸ್ತಫಿಜರ್‌ ಒಮ್ಮೆಗೆ 2 ವಿಕೆಟ್‌ ಕಬಳಿಸಿ ಆಘಾತ ನೀಡಿದರು.ಶಕೀಬ್‌ ಅಲ್‌ ಹಸನ್‌ ಎಸೆತದಲ್ಲಿ ರಿಷಬ್‌ ಪಂತ್‌ ಕ್ಯಾಚ್‌ ನೀಡಿದರು. ದಿನೇಶ್‌ ಕಾರ್ತಿಕ್‌(8) ಹಾಗೂ ಎಂ.ಎಸ್‌.ಧೋನಿ(35) ಸಹ ಮುಸ್ತಫಿಜರ್‌ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಸೆಮಿಫೈನಲ್‌ ಹಂತ ಪ್ರವೇಶ ಜೀವಂತವಾಗಿರಿಸಲು ಬಾಂಗ್ಲಾ ಹುಲಿಗಳು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಭಾರತದ ತಂಡದಲ್ಲಿ ಆಲ್‌ರೌಂಡರ್‌ ಕೇದಾರ್‌ ಜಾದವ್ ಮತ್ತು ಸ್ಪಿನ್ನರ್‌ ಕುಲದೀಪ್‌ ಯಾದವ್‌ ಬದಲು ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಮತ್ತು ದಿನೇಶ್‌ ಕಾರ್ತಿಕ್‌ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾ ಪರ ಮಹಮುಲ್ಲಾ ಗಾಯಗೊಂಡಿದ್ದಾರೆ ಹಾಗೂ ಮೆಹಿದಿ ಹಸನ್‌ ಮಿರಾಜ್‌ ಬದಲು ಶಬ್ಬೀರ್‌ ರಹಮಾನ್‌ ಮತ್ತು ರುಬೆಲ್‌ ಹೊಸೇನ್‌ ಅಂಗಳದಲ್ಲಿದ್ದಾರೆ.

ಭಾನುವಾರ ಇದೇ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ತಂಡವು ಆತಿಥೇಯ ಇಂಗ್ಲೆಂಡ್‌ಗೆ ಶರಣಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.