ADVERTISEMENT

World Cup 2026: ಐರ್ಲೆಂಡ್‌ಗೆ ಭರ್ಜರಿ ಜಯ; ಟೂರ್ನಿಯಿಂದ ಹೊರಬಿದ್ದ ಒಮಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 9:22 IST
Last Updated 14 ಫೆಬ್ರುವರಿ 2026, 9:22 IST
   

ಕೊಲಂಬೊ: ಟಿ–20 ವಿಶ್ವಕಪ್‌ನ ಲೀಗ್‌ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ 96 ರನ್‌ಗಳ ಸೋಲು ಅನುಭವಿಸಿರುವ ಒಮಾನ್ ತಂಡ, ಟೂರ್ನಿಯಿಂದ ಹೊರಬಿದ್ದಿದೆ.

ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್‌ ತಂಡವು ಬ್ಯಾಟಿಂಗ್‌ನಲ್ಲಿ ರನ್ ಹೊಳೆ ಹರಿಸಿತು. ನಾಯಕ ಪೌಲ್ ಸ್ಟರ್ಲಿಂಗ್ ಗಾಯದ ಸಮಸ್ಯೆಯಿಂದ ಹೊರಬಿದ್ದ ಕಾರಣ, ನಾಯಕತ್ವ ವಹಿಸಿಕೊಂಡಿರುವ ಲೋರ್ಕನ್ ಟಕರ್ 51 ಎಸೆತಗಳಲ್ಲಿ 1– ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 94 ರನ್ ಬಾರಿಸಿದರು.

ಗರೆಥ್ ಡೆಲಾನಿ (56 ರನ್;30 ಎಸೆತ) ಹಾಗೂ ಜಾರ್ಜ್ ಡಾಕ್ರೆಲ್ (ಅಜೇಯ 35 ರನ್: 9 ಎಸೆತ) ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಐರ್ಲೆಂಡ್‌ ತಂಡವು 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು.

ADVERTISEMENT

236 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಒಮಾನ್ ತಂಡವು ಬ್ಯಾಟಿಂಗ್‌ನಲ್ಲೂ ವೈಫಲ್ಯ ಅನುಭವಿಸಿತು. 18 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲೌಟ್ ಆಗುವ ಮೂಲಕ 96 ರನ್‌ಗಳ ಸೋಲು ಅನುಭವಿಸಿತು.

ಬಿ–ಗುಂಪಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಒಮಾನ್, ಈ ಬಾರಿಯ ಟೂರ್ನಿಯ ಲೀಗ್ ಹಂತದಲ್ಲೇ ಹೊರಬಿದ್ದ ಮೊದಲ ತಂಡವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.