ADVERTISEMENT

WPL 2024 | RCB Vs MI: ರೋಚಕ ಪಂದ್ಯದ ಸಾರಥಿಗಳು ಇವರು....

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2024, 10:46 IST
Last Updated 2 ಮಾರ್ಚ್ 2024, 10:46 IST
   
ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ರೋಚಕ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಂಡಾಗಣ ಇಂದು ಸಾಕ್ಷಿಯಾಗಲಿದೆ. ಈಗಾಗಲೇ ಒಂದು ಪಂದ್ಯದಲ್ಲಿ ಸೋತು ಎರಡು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಎರಡು ತಂಡಗಳು ತಲಾ ನಾಲ್ಕು ಅಂಕ ಪಡೆದಿವೆ. ಇಂದು ನಡೆಯುವ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸುತ್ತದೆ ಎಂದು ಕಾದು ನೋಡಬೇಕಿದೆ...

ಸ್ಮೃತಿ ಮಂದಾನ(ಆರ್‌ಸಿಬಿ)

ಕಳೆದ ಮೂರು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಮೂರು ಪಂದ್ಯಗಳಲ್ಲಿ 130(ಸರಾಸರಿ 43.33) ರನ್‌ ಗಳಿಸಿದ್ದು, ಆ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.

ಸ್ಮೃತಿ ಮಂದಾನ

ADVERTISEMENT

ಹರ್ಮನ್‌ಪ್ರೀತ್ ಕೌರ್(ಮುಂಬೈ ಇಂಡಿಯನ್ಸ್‌)

ಸ್ಥಿರ ಆಟದ ಪ್ರದರ್ಶನದ ಮೂಲಕ ತಂಡವನ್ನು ಮುನ್ನಡೆಸುತ್ತಿರುವ ಮುಂಬೈ ಇಂಡಿಯನ್‌ ತಂಡದ ಕ್ಯಾಪ್ಟನ್‌ ಹರ್ಮನ್‌ ಪ್ರೀತ್ ಕೌರ್, ಆರ್‌ಸಿಬಿ ತಂಡವನ್ನು ಹೇಗೆ ಎದುರಿಸಲಿದ್ದಾರೆ ಎಂಬ ಕೌತುಕವಿದೆ. ಒಂದು ಅರ್ಧ ಶತಕದೊಂದಿಗೆ ಕಳೆದ ಎರಡು ಪಂದ್ಯಗಳಲ್ಲಿ 101 ರನ್‌ಗಳನ್ನು ಕಲೆ ಹಾಕುವ ಮೂಲಕ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಯುಪಿ ವಾರಿಯರ್ಸ್‌ನೊಂದಿಗಿನ ಸೆಣಸಾಟದಲ್ಲಿ ಗೈರಾಗಿದ್ದ ಕೌರ್‌ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಹರ್ಮನ್‌ಪ್ರೀತ್ ಕೌರ್

ಸೋಫಿ ಮಾಲಿನ್‌(ಆರ್‌ಸಿಬಿ)

ಮಂಗಳವಾರ ಗುಜರಾತ್‌ ಟೈಟನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಸೋಫಿ ಮಾಲಿನ್ ಮೂರು ವಿಕೆಟ್‌ ಕಬಳಿಸಿದ್ದರು(25ಕ್ಕೆ 3). ಇದುವರೆಗೆದ ನಡೆದ ಮೂರು ಪಂದ್ಯದಲ್ಲಿ ಒಟ್ಟು ನಾಲ್ಕು ವಿಕೆಟ್‌ ಪಡೆದಿದ್ದಾರೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿಕೆಟ್ ಕಳೆದುಕೊಂಡರೂ, ಇಂದಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.

ಸೋಫಿ ಮಾಲಿನ್‌

ನಥಾಲಿ ಶಿವರ್ ಬ್ರಂಟ್‌(ಮುಂಬೈ ಇಂಡಿಯನ್ಸ್‌)

ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಶಿವರ್, 60 ರನ್‌ ಕಲೆ ಹಾಕಿದ್ದಾರೆ(ಸರಾಸರಿ 20). ಅಲ್ಲದೇ ಮೂರು ವಿಕೆಟ್ ಕಬಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿಯನ್ನು ಹೇಗೆ ಕಟ್ಟಿ ಹಾಕಲಿದ್ದಾರೆ ಎಂದು ನೋಡಬೇಕಿದೆ.

ನಥಾಲಿ ಶಿವರ್ ಬ್ರಂಟ್‌

ಅಮೇಲಿಯಾ ಕೇರ್‌(ಮುಂಬೈ ಇಂಡಿಯನ್ಸ್‌)

ಆಲ್‌ರೌಂಡರ್‌ ಅಮೇಲಿಯಾ ಕೇರ್ ಮೇಲೆ ಮುಂಬೈ ಇಂಡಿಯನ್ಸ್ ತಂಡ ನಿರೀಕ್ಷೆ ಇಟ್ಟುಕೊಂಡಿದೆ. ಕಳೆದ ಮೂರು ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ಏಳು ವಿಕೆಟ್‌ಗಳನ್ನು ಪಡೆದಿದ್ದಾರೆ. 78 ರನ್(ಸರಾಸರಿ 26) ಗಳಿಸುವ ಮೂಲಕ ಪಂದ್ಯಕ್ಕೆ ಆಸರೆಯಾಗಿದ್ದಾರೆ. ಮತ್ತೊಂದು ಆಲ್‌ ರೌಂಡ್‌ ಪ್ರದರ್ಶನವನ್ನು ತಂಡ ನಿರೀಕ್ಷಿಸದೆ.

ಅಮೇಲಿಯಾ ಕೇರ್‌

ಸಬ್ಬಿನೇನಿ ಮೇಘನಾ (ಆರ್‌ಸಿಬಿ)

ಕಳೆದ ಮೂರು ಪಂದ್ಯಗಳಲ್ಲಿ 125 ರನ್‌(62.50 ಸರಾಸರಿ) ಗಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌‌ ವಿರುದ್ಧದ ಪಂದ್ಯದಲ್ಲಿ ಸ್ವಲ್ಪ ಎಡವಿದ್ದರೂ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ

ಸಬ್ಬಿನೇನಿ ಮೇಘನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.