ADVERTISEMENT

WPL 2025 | GG-W vs RCB-W: ಬೆಂಗಳೂರಿಗೆ 202 ರನ್‌ಗಳ ಗೆಲುವಿನ ಗುರಿ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2025, 16:13 IST
Last Updated 14 ಫೆಬ್ರುವರಿ 2025, 16:13 IST
   

ವಡೋದರಾ: ಭಾರತದ ವನಿತೆಯರ ಕ್ರಿಕೆಟ್‌ ಕ್ಷೇತ್ರದ ಮಹತ್ವಾಕಾಂಕ್ಷೆಯ ಟೂರ್ನಿಯಾಗಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಲ್ಲಿ ಗುಜರಾತ್ ಜೈಂಟ್ಸ್ ತಂಡ ಬೆಂಗಳೂರಿಗೆ 202 ರನ್‌ಗಳ ಗೆಲುವಿನ ಗುರಿ ನೀಡಿದೆ.

ಕೋತಂಬಿ ಕ್ರೀಡಾಂಗಣದಲ್ಲಿ ಉದ್ಘಾಟನೆ ಪಂದ್ಯ ನಡೆಯುತ್ತಿದ್ದು ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದಕೊಂಡು 201 ಪೇರಿಸಿತು.

ಗುಜರಾತ್‌ನ ಮೂನಿ 56, ಗಾರ್ಡನರ್‌ 79 ರನ್‌ಗಳಿಸಿದರು. ಬೆಂಗಳೂರು ಪರ ರೇಣುಕಾ ಸಿಂಗ್ 2 ವಿಕೆಟ್‌ ಪಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.