ADVERTISEMENT

WPL 2026: ಮುಂಬೈಗೆ ಮಣಿದ ಡೆಲ್ಲಿ ಕ್ಯಾಪಿಟಲ್ಸ್‌

ಪಿಟಿಐ
Published 10 ಜನವರಿ 2026, 19:14 IST
Last Updated 10 ಜನವರಿ 2026, 19:14 IST
<div class="paragraphs"><p>ಮುಂಬೈ ಆಟಗಾರ್ತಿಯರ ಸಂಭ್ರಮ</p></div>

ಮುಂಬೈ ಆಟಗಾರ್ತಿಯರ ಸಂಭ್ರಮ

   

ನವಿ ಮುಂಬೈ (ಪಿಟಿಐ): ನಾಟ್‌ ಶಿವರ್ ಬ್ರಂಟ್ ಅವರ ಆಲ್‌ರೌಂಡ್‌ ಆಟ ಹಾಗೂ ಅಮೇಲಿಯಾ ಕೆರ್‌ (24ಕ್ಕೆ3) ಮತ್ತು ನಿಕೋಲಾ ಕ್ಯಾರಿ (37ಕ್ಕೆ3) ಅವರ ಬೌಲಿಂಗ್‌ ಬಲದಿಂದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ಶನಿವಾರ 50 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತು.

ಆರ್‌ಸಿಬಿ ಎದುರು ಶುಕ್ರವಾರ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಸೋಲನುಭವಿಸಿದ್ದ
ಮುಂಬೈ ತಂಡವು ಸುಧಾರಿತ ಪ್ರದರ್ಶನ
ದೊಂದಿಗೆ ಮೊದಲ ಜಯ ಸಾಧಿಸಿತು. ಅನುಭವಿ ಆಟಗಾರ್ತಿ ಯರಾದ ನಾಟ್‌ ಶಿವರ್ ಬ್ರಂಟ್ (70; 46ಎ, 4x13) ಮತ್ತು ಹರ್ಮನ್‌ಪ್ರೀತ್ ಕೌರ್‌ (74; 42ಎ, 4x8, 6x3) ಅವರ ಅರ್ಧಶತಕದ ಬಲದಿಂದ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್‌ಗಳ ಸವಾಲಿನ ಮೊತ್ತ ಗಳಿಸಿತು.

ADVERTISEMENT

ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಅಮೇಲಿಯಾ ಮತ್ತು ನಿಕೋಲಾ ಆಘಾತ ನೀಡಿದರು. ನಿಯಮಿತವಾಗಿ ವಿಕೆಟ್‌ ಕಳೆದುಕೊಂಡ ಜೆಮಿಮಾ ರಾಡ್ರಿಗಸ್‌ ಬಳಗವು 19 ಓವರ್‌ಗಳಲ್ಲಿ 145 ರನ್‌ಗಳಿಗೆ ಕುಸಿಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ ಶಿನೆಲ್‌ ಹೆನ್ರಿ (56; 33ಎ, 4x5, 6x3) ಅರ್ಧಶತಕ ಗಳಿಸಿ ಹೋರಾಟ ತೋರಿದರು. ಬ್ರಂಟ್‌ 29 ರನ್‌ಗಳಿಗೆ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್‌: 20 ಓವರುಗಳಲ್ಲಿ 4ಕ್ಕೆ 195 (ನಾಟ್‌ ಶಿವರ್ ಬ್ರಂಟ್ 70, ಹರ್ಮನ್‌ಪ್ರೀತ್ ಕೌರ್ 74; ನಂದನಿ ಶರ್ಮಾ 26ಕ್ಕೆ2). ಡೆಲ್ಲಿ ಕ್ಯಾಪಿಟಲ್ಸ್‌: 19 ಓವರ್‌ಗಳಲ್ಲಿ 145 (ಶಿನೆಲ್‌ ಹೆನ್ರಿ 56; ಅಮೇಲಿಯಾ ಕೆರ್‌ 24ಕ್ಕೆ3, ನಿಕೋಲಾ ಕ್ಯಾರಿ 37ಕ್ಕೆ3, ನಾಟ್‌ ಶಿವರ್ ಬ್ರಂಟ್ 29ಕ್ಕೆ2). ಫಲಿತಾಂಶ: ಮುಂಬೈ ಇಂಡಿಯನ್ಸ್‌ ತಂಡಕ್ಕೆ 50 ರನ್‌ ಗೆಲುವು. ಪಂದ್ಯದ ಆಟಗಾರ್ತಿ: ಹರ್ಮನ್‌ಪ್ರೀತ್ ಕೌರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.