
ಟ್ರೋಫಿ ಗೆದ್ದ ಸಂಭ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ
ಚಿತ್ರ: ಪಿಟಿಐ
ಮಹಿಳಾ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದಾಗಿ ಮಹಿಳಾ ಪ್ರೀಮಿಯರ್ ಲೀಗ್ ಅನ್ನು 2023ರಲ್ಲಿ ಆಯೋಜನೆ ಮಾಡಲಾಯಿತು. ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಗೆದ್ದ ಬಳಿಕ ಮಹಿಳಾ ಕ್ರಿಕೆಟ್ ಮತ್ತಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ಈ ನಡುವೆ 2026ರ WPLಗಾಗಿ ಆಟಗಾರ್ತಿಯರ ಮೆಗಾ ಹರಾಜು ಇಂದು (ಗುರುವಾರ) ನಡೆಯಲಿದೆ.
ನವದೆಹಲಿಯಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಭಾರತದ 194 ಹಾಗೂ 83 ವಿದೇಶಿ ಆಟಗಾರ್ತಿಯರು ಸೇರಿ ಒಟ್ಟು 277 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಅಗತ್ಯವಿರುವ ಸ್ಲಾಟ್‌ಗಳು
ಸದ್ಯ, ನಡೆಯಲಿರುವ ಹರಾಜಿನಲ್ಲಿ 23 ವಿದೇಶಿಯರು, 50 ಭಾರತೀಯರು ಸೇರಿದಂತೆ ಒಟ್ಟು 73 ಆಟಗಾರ್ತಿಯರನ್ನು ಮಾತ್ರ ಖರೀದಿಸಬಹುದಾಗಿದೆ. ಪ್ರತೀ ತಂಡವು ಕನಿಷ್ಠ 15 ರಿಂದ 18 ಆಟಗಾರ್ತಿಯರನ್ನು ಖರೀದಿಸಬಹುದು.
ಕಳೆದ ವರ್ಷ ಬಿಡುಗಡೆ ಮಾಡಿರುವ ಆಟಗಾರ್ತಿಯರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳಿಗೆ ರೈಟ್ ಟು ಮ್ಯಾಚ್ (RTM) ಅವಕಾಶ ನೀಡಿದೆ. ಆ ಮೂಲಕ ಐವರು ಆಟಗಾರ್ತಿಯರನ್ನು ಸೇರಿಸಿಕೊಳ್ಳಬಹುದು. ಸದ್ಯ ಎಲ್ಲಾ ಫ್ರಾಂಚೈಸಿಗಳಿಂದ ಸೇರಿ ಪರ್ಸ್‌ನಲ್ಲಿ ಉಳಿದಿರುವ ಒಟ್ಟು ಮೊತ್ತ ₹41.1 ಕೋಟಿ.
ತಂಡಗಳ ಬಳಿ ಉಳಿದಿರುವ ಮೊತ್ತ
ಯುಪಿ ವಾರಿಯರ್ಸ್: ₹14.50 ಕೋಟಿ
ಗುಜರಾತ್ ಜೈಂಟ್ಸ್: ₹9 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹6.15 ಕೋಟಿ
ಮುಂಬೈ ಇಂಡಿಯನ್ಸ್: ₹5.75 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: ₹5.70 ಕೋಟಿ
ಯುಪಿ ವಾರಿಯರ್ಜ್
ಶ್ವೇತಾ ಸೆಹ್ರಾವತ್ (₹50 ಲಕ್ಷ)
ಗುಜರಾತ್ ಜೈಂಟ್ಸ್
ಆಶ್ಲೀ ಗಾರ್ಡ್ನರ್ (₹3.5 ಕೋಟಿ)
ಬೆತ್ ಮೂನಿ (₹2.5 ಕೋಟಿ)
ಡೆಲ್ಲಿ ಕ್ಯಾಪಿಟಲ್ಸ್
ಜೆಮಿಮಾ ರಾಡ್ರಿಗಸ್ (₹2.2 ಕೋಟಿ)
ಶಫಾಲಿ ವರ್ಮಾ (₹2.2 ಕೋಟಿ)
ಅನ್ನಾಬೆಲ್ ಸದರ್ಲ್ಯಾಂಡ್ (₹2.2 ಕೋಟಿ)
ಮರಿಜಾನ್ನೆ ಕಪ್ (₹2.2 ಕೋಟಿ)
ನಿಕಿ ಪ್ರಸಾದ್ (₹50 ಲಕ್ಷ)
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸ್ಮೃತಿ ಮಂದಾನ (₹3.5 ಕೋಟಿ)
ರಿಚಾ ಘೋಷ್ (₹2.75 ಕೋಟಿ)
ಎಲಿಸ್ ಪೆರ್ರಿ (₹2 ಕೋಟಿ)
ಶ್ರೇಯಂಕಾ ಪಾಟೀಲ್ (₹60 ಲಕ್ಷ)
ಮುಂಬೈ ಇಂಡಿಯನ್ಸ್
ನ್ಯಾಟ್ ಸ್ಕಿವರ್-ಬ್ರಂಟ್ (₹3.5 ಕೋಟಿ)
ಹರ್ಮನ್‌ಪ್ರೀತ್ ಕೌರ್ (₹2.5 ಕೋಟಿ)
ಹೇಲಿ ಮ್ಯಾಥ್ಯೂಸ್ (₹1.75 ಕೋಟಿ)
ಅಮನ್‌ಜೋತ್ ಕೌರ್ (₹1 ಕೋಟಿ)
ಜಿ. ಕಮಲಿನಿ (₹50 ಲಕ್ಷ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.