ಆರ್‌ಸಿಬಿ ಆಟಗಾರ್ತಿ ಗ್ರೇಸ್ ಹ್ಯಾರಿಸ್
ಬೆಂಗಳೂರು: ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ಇದೇ 9ರಿಂದ ಆರಂಭವಾಗುತ್ತಿದೆ. ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲು ಸಜ್ಜಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ಆಟಗಾರ್ತಿಯರು ಭರ್ಜರಿಯಾಗಿ ಫೋಟೊಶೋಟ್ ಮಾಡಿಸಿದ್ದಾರೆ.
ಫೋಟೊಶೂಟ್ ಹೇಗೆ ನಡೆಯಿತು ಎನ್ನುವ ಬಗ್ಗೆ ಬಿಟಿಎಸ್ ವಿಡಿಯೊವನ್ನು ಆರ್‌ಸಿಬಿ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದೆ.
ಫೋಟೊಶೂಟ್ ವೇಳೆ ಆರ್‌ಸಿಬಿ ಜೆರ್ಸಿ ತೊಟ್ಟು, ಬ್ಯಾಟ್ ಹಿಡಿದು, ಬಾಲನ್ನು ಕ್ಯಾಚ್ ಹಿಡಿಯುವ ರೀತಿ, ಗ್ಲೌಸ್ ತೊಟ್ಟು ಹೀಗೆ ವಿವಿಧ ರೀತಿಯಲ್ಲಿ ಪೋಸ್ ನೀಡಿರುವ ಆಟಗಾರ್ತಿಯರು, ಡ್ಯಾನ್ಸ್ ಮಾಡುತ್ತಾ, ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಫೋಟೊ ತೆಗೆಸಿಕೊಂಡಿದ್ದಾರೆ. ಇದರ ವಿಡಿಯೊ ಸದ್ಯ ನೆಟ್ಟಿಗರ ಮನ ಗೆದ್ದಿದೆ.
ವಿಡಿಯೊಗೆ ‘ಏನಪ್ಪಾ ಬಿಟಿಎಸ್‌ಗೆ ರೆಡಿ ನಾ?’ ಎಂದು ಒಕ್ಕಣೆ ಬರೆಯಲಾಗಿದೆ.
ಬಿಗ್‌ಬಾಸ್ಕೆಟ್ ಪ್ರಾಯೋಜಕತ್ವದಲ್ಲಿ ಆರ್‌ಸಿಬಿ ಮಹಿಳಾ ತಂಡ ಕಣಕ್ಕಿಳಿಯುತ್ತಿದೆ. ನವಿ ಮುಂಬೈನಲ್ಲಿ ಜನವರಿ 9ರಂದು (ಶುಕ್ರವಾರ) ನಿಗದಿಯಾಗಿರುವ ಪಂದ್ಯದಲ್ಲಿ, ಆರ್‌ಸಿಬಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲೊಡ್ಡಲಿದೆ.
ಆರ್‌ಸಿಬಿ ಪಂದ್ಯಗಳು ಯಾವಾಗ?
vs ಮುಂಬೈ ಇಂಡಿಯನ್ಸ್ – ಜನವರಿ 9 (ನವಿ ಮುಂಬೈ)
vs ಯುಪಿ ವಾರಿಯರ್ಸ್ – ಜನವರಿ 12 (ನವಿ ಮುಂಬೈ)
vs ಗುಜರಾತ್ ಜೈಂಟ್ಸ್ – ಜನವರಿ 16 (ನವಿ ಮುಂಬೈ)
vs ಡೆಲ್ಲಿ ಕ್ಯಾಪಿಟಲ್ಸ್ – ಜನವರಿ 17 (ನವಿ ಮುಂಬೈ)
vs ಗುಜರಾತ್ ಜೈಂಟ್ಸ್ – ಜನವರಿ 19 (ವಡೋದರ)
vs ಡೆಲ್ಲಿ ಕ್ಯಾಪಿಟಲ್ಸ್ – ಜನವರಿ 24 (ವಡೋದರ)
vs ಮುಂಬೈ ಇಂಡಿಯನ್ಸ್ – ಜನವರಿ 26 (ವಡೋದರ)
vs ಯುಪಿ ವಾರಿಯರ್ಸ್ – ಜನವರಿ 29 (ವಡೋದರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.