ADVERTISEMENT

WTC Final | ಕೊಹ್ಲಿ, ರಹಾನೆ ವಿಕೆಟ್ ಪತನ: ಸೋಲಿನ ಭೀತಿಯಲ್ಲಿ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜೂನ್ 2023, 11:12 IST
Last Updated 11 ಜೂನ್ 2023, 11:12 IST
   

ಲಂಡನ್: ಸತತ ಎರಡನೇ ಬಾರಿಯೂ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲುವ ಭೀತಿ ಕಾಡುತ್ತಿದೆ.

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದ ಅಂತಿಮ ದಿನದಾಟದಲ್ಲಿ ಭಾರತೀಯ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದಾರೆ.

ಅಂತಿಮ ದಿನದಾಟದಲ್ಲಿ ತಾಜಾ ವರದಿಯ ವೇಳೆಗೆ ಟೀಮ್ ಇಂಡಿಯಾ 58 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದೆ.

ADVERTISEMENT

ಭಾರತಕ್ಕಿನ್ನು ಗೆಲ್ಲಲು 231 ರನ್ ಬೇಕಾಗಿದೆ. ಆದರೆ ಈ ಗುರಿ ತಲುಪುವುದು ಕಷ್ಟ ಸಾಧ್ಯವೆನಿಸಿದೆ. ಅತ್ತ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ಆಸ್ಟ್ರೇಲಿಯಾಕ್ಕೆ ಮೂರು ವಿಕೆಟ್ ಮಾತ್ರ ಬೇಕಾಗಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ 49 ಹಾಗೂ ಅಜಿಂಕ್ಯ ರಹಾನೆ 46 ರನ್ ಗಳಿಸಿ ಔಟ್ ಆದರು. ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲಂಡ್ ಮೂರು ಮತ್ತು ನಥನ್ ಲಯಾನ್ ಎರಡು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.