ADVERTISEMENT

ಜಿಂಬಾಬ್ವೆ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧೆ?

ಪಿಟಿಐ
Published 5 ನವೆಂಬರ್ 2022, 14:01 IST
Last Updated 5 ನವೆಂಬರ್ 2022, 14:01 IST
ಐಸಿಸಿ ಲೋಗೊ
ಐಸಿಸಿ ಲೋಗೊ   

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಮುಖ್ಯಸ್ಥ ಸ್ಥಾನಕ್ಕೆ ಜಿಂಬಾಬ್ವೆ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ತವೆಂಗ್ವಾ ಮುಕುಲಾನಿ ಸ್ಪರ್ಧಿಸುವ ಸಾಧ್ಯತೆಯಿದೆ.

ಮೆಲ್ಬರ್ನ್‌ನಲ್ಲಿ ಇದೇ 12–13ರಂದು ಐಸಿಸಿ ಮುಖ್ಯಸ್ಥ ಹುದ್ದೆಗೆ ಚುನಾವಣೆ ನಿಗದಿಯಾಗಿದೆ. ಹಾಲಿ ಮುಖ್ಯಸ್ಥ ಗ್ರೆಗ್ ಬರ್ಕ್ಲೆ ಅವರಿಗೆ ಮುಕುಲಾನಿ ಸವಾಲೊಡ್ಡುವ ಸಾಧ್ಯತೆಯಿದೆ.

ವಿಶ್ವವಿದ್ಯಾನಿಲಯದ ದಿನಗಳಲ್ಲಿ ಫಾರ್ಮ್ಯಾಸಿಸ್ಟ್ ಆಗಿದ್ದ ಮುಕುಲಾನಿ ಅವರು ‘ಡಾಕ್’ ಎಂದೇ ಹೆಸರಾಗಿದ್ದರು. ದೀರ್ಘಕಾಲದಿಂದ ಅವರು ಐಸಿಸಿ ಮಂಡಳಿಯಲ್ಲಿದ್ದಾರೆ. ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ಸಣ್ಣ ದೇಶಗಳಿಂದ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

2020ರ ಚುನಾವಣೆಯಲ್ಲಿ ಬರ್ಕ್ಲೆ ಎದುರು ಸೋತಿದ್ದ ಉಪ ಮುಖ್ಯಸ್ಥ ಇಮ್ರಾನ್ ಕ್ವಾಜಾ ಅವರು ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಐಸಿಸಿ ಮಂಡಳಿಯಲ್ಲಿ 16 ಮತಗಳಿವೆ. 12 ಮಂದಿ ಪೂರ್ಣ ಸದಸ್ಯತ್ವ ಹೊಂದಿರುವವರು, ಒಬ್ಬ ಸ್ವತಂತ್ರ ನಿರ್ದೇಶಕರು (ಇಂದ್ರಾ ನೂಯಿ) ಮತ್ತು ಮೂರು ಸಹ ನಿರ್ದೇಶಕರ ಮತಗಳಿವೆ.

ಮುಖ್ಯಸ್ಥರ ಆಯ್ಕೆಗೆ ಈ ಬಾರಿ ಸರಳ ಬಹುಮತ ಅಗತ್ಯವಿದೆ. ಈ ಹಿಂದೆ ಮೂರನೇ ಎರಡರಷ್ಟು ಮತಗಳು ಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.