ಲಾಹೋರ್: ಪಾಕಿಸ್ತಾನದಲ್ಲಿ ನವೆಂಬರ್ 17ರಿಂದ 29ರವರೆಗೆ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಅಫ್ಗಾನಿಸ್ತಾನದ ಬದಲು ಜಿಂಬಾಬ್ವೆ ತಂಡ ಕಣಕ್ಕಳಿಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿದೆ.
ಪಾಕ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ತಮ್ಮ ದೇಶದ ಮೂವರು ಯುವ ಕ್ರಿಕೆಟಿಗರು ಸಾವನ್ನಪ್ಪಿದ ಬಳಿಕ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯು ಪಾಕಿಸ್ತಾನಕ್ಕೆ ತಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಹೇಳಿತ್ತು.
‘ಶ್ರೀಲಂಕಾವನ್ನು ಒಳಗೊಂಡ ತ್ರಿಕೋನ ಟಿ20 ಸರಣಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಹ್ವಾನವನ್ನು ಜಿಂಬಾಬ್ವೆ ಕ್ರಿಕೆಟ್ ಸ್ವೀಕರಿಸಿದೆ’ ಎಂದು ಪಿಸಿಬಿ ಶನಿವಾರ ತಿಳಿಸಿದೆ.
‘ಪಾಕ್ ನೆಲದಲ್ಲಿ ನಡೆಯಲಿರುವ ಚೊಚ್ಚಲ ಟಿ20 ತ್ರಿಕೋನ ಸರಣಿಯು ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಈ ಮೂರು ತಂಡಗಳಿಗೆ ವೇದಿಕೆಯಾಗಿದೆ’ ಎಂದು ಪಿಸಿಬಿ ಅಭಿಪ್ರಾಯಪಟ್ಟಿದೆ.
ಸರಣಿಯ ಮೊದಲ ಪಂದ್ಯ ನ.17ರಂದು ರಾವಲ್ಪಿಂಡಿ ಕ್ರೀಡಾಂಗದಲ್ಲಿ ಪಾಕ್ ಮತ್ತು ಜಿಂಬ್ವಾಬ್ವೆ ತಂಡಗಳ ನಡುವೆ ನಡೆಯಲಿದೆ. ನ.19ರಂದು ಅದೇ ತಾಣದಲ್ಲಿ ಶ್ರೀಲಂಕಾ ಮತ್ತು ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.