ADVERTISEMENT

FIFA World Cup 2026: ಮುಂದಿನ ಟೂರ್ನಿಗೆ 48 ತಂಡಗಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 22:00 IST
Last Updated 19 ಡಿಸೆಂಬರ್ 2022, 22:00 IST
   

ದೋಹಾ: ನಲವತ್ತೆಂಟು ತಂಡಗಳು, ಮೂರು ದೇಶಗಳ ಅತಿಥ್ಯ, ನೂರಕ್ಕೂ ಅಧಿಕ ಪಂದ್ಯಗಳು...

ಕತಾರ್‌ ವಿಶ್ವಕಪ್‌ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿರುವ ಫಿಫಾ, ಮುಂದಿನ ವಿಶ್ವಕಪ್‌ ಟೂರ್ನಿಯನ್ನು ಇನ್ನಷ್ಟು ದೊಡ್ಡದಾಗಿ ಆಯೋಜಿಸಲು ತೀರ್ಮಾನಿಸಿದೆ. 2026ರ ಟೂರ್ನಿಯು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಆತಿಥ್ಯದಲ್ಲಿ ನಡೆಯಲಿದೆ. ಮೂರು ದೇಶಗಳು ಜಂಟಿ ಆತಿಥ್ಯ ವಹಿಸಲಿರುವುದು ಫಿಫಾ ಇತಿಹಾಸದಲ್ಲಿ ಇದೇ ಮೊದಲು.

ತಂಡಗಳ ಸಂಖ್ಯೆಯನ್ನು ಈಗಿನ 32 ರಿಂದ 48ಕ್ಕೆ ಹೆಚ್ಚಿಸಲು ಫಿಫಾ ಚಿಂತನೆ ನಡೆಸಿದೆ.

ADVERTISEMENT

48 ತಂಡಗಳನ್ನು ಒಳಗೊಂಡಿರುವ ಟೂರ್ನಿಯಲ್ಲಿ ಪಂದ್ಯಗಳನ್ನು ಯಾವ ಮಾದರಿಯಲ್ಲಿ ನಡೆಸಬೇಕು ಎಂಬುದನ್ನು ಫಿಫಾ ಇನ್ನೂ ಅಂತಿಮಗೊಳಿಸಿಲ್ಲ. ಲೀಗ್‌ ಹಂತದಲ್ಲಿ ತಲಾ 12 ತಂಡಗಳ ನಾಲ್ಕು ಗುಂಪುಗಳನ್ನು ಮಾಡಿ ಆಡಿಸುವ ಸಾಧ್ಯತೆಯೇ ಅಧಿಕ.

ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಮತ್ತು ಬಳಿಕದ ಅತ್ಯುತ್ತಮ ಸಾಧನೆ ಮಾಡಿದ ಇತರ 8 ತಂಡಗಳು ನಾಕೌಟ್‌ ಪ್ರವೇಶಿಸಲಿವೆ. ಹಾಗಾದಲ್ಲಿ ಟೂರ್ನಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.