ADVERTISEMENT

ಫಿಫಾ ವಿಶ್ವಕಪ್‌: ಅಧಿಕೃತ ಚೆಂಡು ಬಿಡುಗಡೆ

ಪಿಟಿಐ
Published 1 ಏಪ್ರಿಲ್ 2022, 15:24 IST
Last Updated 1 ಏಪ್ರಿಲ್ 2022, 15:24 IST
ವಿಶ್ವಕಪ್‌ನ ಅಧಿಕೃತ ಚೆಂಡು ಅಲ್ ರಿಹ್ಲಾದೊಂದಿಗೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫೆಂಟಿನೊ –ಎಎಫ್‌ಪಿ ಚಿತ್ರ
ವಿಶ್ವಕಪ್‌ನ ಅಧಿಕೃತ ಚೆಂಡು ಅಲ್ ರಿಹ್ಲಾದೊಂದಿಗೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫೆಂಟಿನೊ –ಎಎಫ್‌ಪಿ ಚಿತ್ರ   

ನವದೆಹಲಿ: ಕ್ರೀಡಾ ಪೋಷಾಕುಗಳ ಸಂಸ್ಥೆ ಅಡಿಡಾಸ್ ಈ ಬಾರಿಯ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಅಧಿಕೃತ ಚೆಂಡನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕತಾರ್‌ನಲ್ಲಿ ನಡೆಯಲಿರುವ ಟೂರ್ನಿಯ ಚೆಂಡಿಗೆ ಅಲ್ ರಿಹ್ಲಾ ಎಂದು ಹೆಸರಿಡಲಾಗಿದೆ.

ಫಿಫಾ ವಿಶ್ವಕಪ್ ಟೂರ್ನಿಗಾಗಿ ಅಡಿಡಾಸ್ ಸತತ 14ನೇ ಬಾರಿ ಚೆಂಡು ಸಿದ್ಧಗೊಳಿಸಿದ್ದು ಅಲ್ ರಿಹ್ಲಾ ಎಂದರೆ ಅರೆಬಿಕ್ ಭಾಷೆಯಲ್ಲಿ ಪಯಣ ಎಂದು ವಿವರಿಸಲಾಗಿದೆ. ಈ ಬಾರಿ ಚೆಂಡು ತಯಾರಿಯಲ್ಲಿ ಪರಿಸರ ರಕ್ಷಣೆಗೆ ಒತ್ತು ನೀಡಲಾಗಿದೆ. ಜಲಾಧಾರಿತ ಶಾಯಿ ಮತ್ತು ಅಂಟು ಮಾತ್ರ ಬಳಸಿ ಈ ಚೆಂಡು ತಯಾರಿಸಲಾಗಿದೆ.

ವಿಶ್ವಕಪ್‌ನ 92 ವರ್ಷಗಳ ಇತಿಹಾಸದಲ್ಲಿ ವಿಶ್ವದಾದ್ಯಂತ ಸಂಕಷ್ಟದಲ್ಲಿರುವವ ನೆರವಿಗೆ ಸ್ಪಂದಿಸಲು ನೇರವಾಗಿ ನಿಧಿ ಸಂಗ್ರಹಿಸುವ ಮೊದಲ ಚೆಂಡು ಆಗಿದೆ. ಅಲ್‌ ರಿಹ್ಲಾ ಮಾರಾಟದಿಂದ ಬರುವ ಆದಾಯದ ಶೇಕಡಾ ಒಂದಂಶವನ್ನು ನಿಧಿಗಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.