ADVERTISEMENT

ಎಐಎಫ್‌ಎಫ್‌: ಮೊದಲ ಬಾರಿಗೆ ಪೂರ್ಣಪ್ರಮಾಣದ ರೆಫರಿ ನೇಮಕ

ಪಿಟಿಐ
Published 10 ಜನವರಿ 2023, 19:32 IST
Last Updated 10 ಜನವರಿ 2023, 19:32 IST
ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌
ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌    

ನವದೆಹಲಿ: ಭಾರತದ ಫುಟ್‌ಬಾಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದದಲ್ಲಿ ಎಲೀಟ್‌ ರೆಫರಿ ಮತ್ತು ಸಹಾಯಕ ರೆಫರಿಗಳ ಮೊದಲ ಬ್ಯಾಚ್‌ಅನ್ನು ನೇಮಕ ಮಾಡಿಕೊಳ್ಳಲಾಗಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಮತ್ತು ಅದರ ವ್ಯಾವಹಾರಿಕ ಪಾಲುದಾರ ಎಲೀಟ್‌ ರೆಫರಿಯಿಂಗ್‌ ಡೆವಲಪ್‌ಮೆಂಟ್‌ ಪ್ಲಾನ್‌ನ (ಇಆರ್‌ಡಿಪಿ) ಜಂಟಿ ಹೂಡಿಕೆಯಲ್ಲಿ ಈ ಯೋಜನೆ ರೂಪಿಸಲಾಗಿದೆ. ಭಾರತ ಫುಟ್‌ಬಾಲ್ ವ್ಯವಸ್ಥೆಯಲ್ಲಿ ರೆಫರಿ ಹುದ್ದೆಗಳನ್ನು ವೃತ್ತಿಜೀವನದ ಮಾರ್ಗವಾಗಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.

ಮೊದಲ ಬ್ಯಾಚ್‌ನಲ್ಲಿ ಎಂಟು ರೆಫರಿಗಳು ಮತ್ತು ಅಷ್ಟೇ ಸಂಖ್ಯೆಯ ಸಹಾಯಕ ರೆಫರಿಗಳು ಇದ್ದಾರೆ. 2024ರಲ್ಲಿ ಎರಡನೇ ಬ್ಯಾಚ್‌ಅನ್ನು ಘೋಷಿಸಲಾಗುತ್ತದೆ.

ADVERTISEMENT

‘ಈ ಕ್ರಮವು ಹೆಚ್ಚಿನ ರೆಫರಿಗಳನ್ನು ಸೆಳೆಯುತ್ತದೆ. ವಿಶೇಷವಾಗಿ ತಳಮಟ್ಟದಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಫುಟ್‌ಬಾಲ್‌ ಕ್ರೀಡೆಯ ಬೆಳವಣಿಗೆಗೆ ಇದು ಅನುಕೂಲವಾಗಲಿದೆ‘ ಎಂದು ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್ ಚೌಬೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.