ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡದ ವುಮ್‌ಲೆನ್‌ಲಾಲ್ ಹಾಂಗ್‌ಶಿಂಗ್ (ಕೆಂಪು ಜೆರ್ಸಿ) ಹಾಗೂ ಎಚ್‌ಎಎಲ್ ಸ್ಪೋರ್ಟ್ಸ್ ಕ್ಲಬ್ ತಂಡದ ಸೂರಜ್ ವಾಂಗ್‌ಖೆಮ್ ಅವರು ಚೆಂಡಿಗಾಗಿ ಸೆಣಸಿದರು ಚಿತ್ರ: ಬಿ.ಕೆ. ಜನಾರ್ದನ
ಬೆಂಗಳೂರು: ರೊಮಾರಿಯೊ ನಝರೆತ್ (15ನೇ ನಿ.) ಹಾಗೂ ಜುನೈನ್ ಕೆ. (63ನೇ ನಿ.) ಅವರ ಗೋಲುಗಳ ನೆರವಿನಿಂದ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–0ರಿಂದ ಎಚ್‌ಎಎಲ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮತ್ತೊಂದು ಪಂದ್ಯದಲ್ಲಿ ರೆಬೆಲ್ಸ್ ಫುಟ್‌ಬಾಲ್ ಕ್ಲಬ್ ತಂಡವು 2–0ಯಿಂದ ರೂಟ್ಸ್ ಎಫ್‌ಸಿ ತಂಡವನ್ನು ಮಣಿಸಿತು.
ಎಎಸ್‌ಸಿ ಆ್ಯಂಡ್ ಸೆಂಟರ್ ಎಫ್‌ಸಿ ಹಾಗೂ ಸೌತ್ ಯುನೈಟೆಡ್ ನಡುವಣ ಪಂದ್ಯವು 1–1 ಡ್ರಾ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.