ADVERTISEMENT

ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 22:23 IST
Last Updated 12 ನವೆಂಬರ್ 2025, 22:23 IST
<div class="paragraphs"><p>ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದ ಸೈಖೊಮ್‌ ಬೋರಿಶ್‌ ಸಿಂಗ್‌ (ಎಡ) ಹಾಗೂ ರೂಟ್ಸ್‌ ಎಫ್‌ಸಿ ತಂಡದ ಬಿ.ಪಿ.ಅನಿಕೇತ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು </p></div>

ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದ ಸೈಖೊಮ್‌ ಬೋರಿಶ್‌ ಸಿಂಗ್‌ (ಎಡ) ಹಾಗೂ ರೂಟ್ಸ್‌ ಎಫ್‌ಸಿ ತಂಡದ ಬಿ.ಪಿ.ಅನಿಕೇತ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು

   

–ಚಿತ್ರ: ಬಿ.ಕೆ.ಜನಾರ್ದನ

ಬೆಂಗಳೂರು: ಸಂಘಟಿತ ಆಟ ಆಡಿದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಬುಧವಾರ 3–0ಯಿಂದ ಎಫ್‌ಸಿ ರಿಯಲ್‌ ಬೆಂಗಳೂರು ತಂಡವನ್ನು ಸುಲಭವಾಗಿ ಮಣಿಸಿತು.

ADVERTISEMENT

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಧ್ರುವ್‌ ಶರ್ಮಾ ಅವರು 28ನೇ ನಿಮಿಷದಲ್ಲಿ ಗೋಲು ಗಳಿಸಿ ಯುನೈಟೆಡ್‌ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಬಳಿಕ, ರಿಭವ್‌ ಎಸ್‌. (66ನೇ ನಿ.) ಹಾಗೂ ಜುನೈನ್‌ ಕೆ. (82ನೇ ನಿ.) ಅವರು ಗೋಲಿನ ಅಂತರವನ್ನು ಹಿಗ್ಗಿಸಿದರು. ರಿಯಲ್‌ ಬೆಂಗಳೂರು ತಂಡದ ಆಟಗಾರರು ಎದುರಾಳಿ ತಂಡದ ರಕ್ಷಣಾ ಕೋಟೆ ಬೇಧಿಸುವಲ್ಲಿ ವಿಫಲರಾದರು.

ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಸಿಟಿ ಫುಟ್‌ಬಾಲ್‌ ಕ್ಲಬ್‌ ತಂಡವು 2–1ರಿಂದ ರೆಬೆಲ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು. ಬೆಂಗಳೂರು ಸಿಟಿ ತಂಡದ ಪ್ರಸನ್ನ ಸ್ವಾಮಿನಾಥನ್‌ (42ನೇ ನಿ.) ಹಾಗೂ ಆರ್‌.ಎಸ್‌.ಜಲ್ಸಿಸ್‌ (76ನೇ ನಿ.) ತಲಾ ಒಂದು ಗೋಲು ಹೊಡೆದರೆ, ರೆಬೆಲ್ಸ್‌ ತಂಡದ ಪರ ಮಾಹಿನ್ ರಿಝಾ (87ನೇ ನಿ.) ಏಕೈಕ ಗೋಲು ಹೊಡೆದರು.

ಕಿಕ್‌ಸ್ಟಾರ್ಟ್‌ ಎಫ್‌ಸಿ ಹಾಗೂ ರೂಟ್ಸ್‌ ಎಫ್‌ಸಿ ನಡುವಣ ಪಂದ್ಯ 1–1 ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.