ರೊನಾಲ್ಡೊ
ಪ್ಯಾರಿಸ್: ಫೋರ್ಬ್ಸ್ ಸಿದ್ಧಪಡಿಸಿರುವ, ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಫುಟ್‌ಬಾಲ್ ಆಟಗಾರ ಪಟ್ಟಿಯಲ್ಲಿ ಪೋರ್ಚುಗಲ್‌ನ ಮಹಾನ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ. ಕಳೆದ ಒಂದು ದಶಕದಲ್ಲಿ ರೊನಾಲ್ಡೊ ಆರನೇ ಬಾರಿ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
ಸೌದಿ ಅರೇಬಿಯಾದಲ್ಲಿ ಆಡುತ್ತಿರುವ ಮೂವರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. 40 ವರ್ಷ ವಯಸ್ಸಿನ ರೊನಾಲ್ಡೊ ಅವರು ಫುಟ್‌ಬಾಲ್‌ನ ಮೊದಲ ಶತಕೋಟ್ಯಾಧೀಶ ಎಂದು ವಾರದ ಹಿಂದೆಯಷ್ಟೇ ಬ್ಲೂಂಬರ್ಗ್ ಪ್ರಕಟಿಸಿತ್ತು. ಫೋರ್ಬ್ಸ್ ಪ್ರಕಾರ ಅಲ್ ನಾಸರ್ ಕ್ಲಬ್‌ಗೆ ಆಡುವ ರೊನಾಲ್ಡೊ ಕ್ರೀಡಾಂಗಣದಲ್ಲಿ ಮತ್ತು ಹೊರಗಿನ ಒಪ್ಪಂದಗಳಿಂದ ₹24.7 ಶತಕೋಟಿ (280 ದಶಲಕ್ಷ ಡಾಲರ್) ಸಂಪಾದಿಸಿದ್ದಾರೆ.
ರೊನಾಲ್ಡೊ ಸಂಪಾದನೆಯು ಎರಡನೇ ಸ್ಥಾನದಲ್ಲಿರುವ ಅರ್ಜೆಂಟೀನಾದ ದಿಗ್ಗಜ ಲಯೊನೆಲ್ ಮೆಸ್ಸಿ ಅವರಿಗಿಂತ ಎರಡು ಪಟ್ಟು ಅಧಿಕವಾಗಿದೆ. ಅಮೆರಿಕದ ಇಂಟರ್ ಮಯಾಮಿ ಕ್ಲಬ್‌ಗೆ ಆಡುವ ಮೆಸ್ಸಿ ಅವರ ಸಂಪಾದನೆ ₹1,086 ಕೋಟಿ (130 ದಶಲಕ್ಷ ಡಾಲರ್) ಆಗಿದೆ. ಆದರೆ ಕ್ಲಬ್‌ನಿಂದ ಪಡೆಯುವ ಸಂಭಾವನೆಗಿಂತ ಬೇರೆ ಮೂಲಗಳಿಂದ ಅವರ ಆದಾಯ ಹೆಚ್ಚು ಇದೆ.
ಬ್ಯಾಲನ್ ಡಿ ಓರ್ ವಿಜೇತ ಕರಿಮ್ ಬೆನೆಝೆಮಾ ಅವರ ಸಂಪಾದನೆ ₹926 ಕೋಟಿ. ಅವರು ಸೌದಿಯ ಅಲ್ ಇತ್ತಿಹಾದ್ ಪರ ಭಾರಿ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.
ರೊನಾಲ್ಡೊ ಅವರ ಜೊತೆ ಅಲ್ ನಾಸರ್‌ಗೆ ಆಡುವ ಸೆನೆಗಲ್‌ನ ಫಾರ್ವರ್ಡ್ ಸಾದಿಯೊ ಮಾನೆ ಅವರ ಆದಾಯ ಅಂದಾಜು ₹440 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.