ಟ್ಯೂರಿನ್: ಕೋವಿಡ್–19 ಬಿಕ್ಕಟ್ಟಿನ ಕಾರಣ ಎರಡು ತಿಂಗಳು ಮೈದಾನದಿಂದ ದೂರ ಉಳಿದಿದ್ದ ಪೋರ್ಚುಗಲ್‌ನ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಭ್ಯಾಸಕ್ಕೆ ಮರಳಿದ್ದಾರೆ.
35 ವರ್ಷ ವಯಸ್ಸಿನ ರೊನಾಲ್ಡೊ, ಮಂಗಳವಾರ ಯುವೆಂಟಸ್ ಕ್ಲಬ್‌ನ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅಭ್ಯಾಸ ನಡೆಸಿದರು. ಇದಕ್ಕೂ ಮುನ್ನ ಅವರು ವೈದ್ಯಕೀಯ ಪರೀಕ್ಷೆ ಎದುರಿಸಿದರು.
ಯುವೆಂಟಸ್ ತಂಡದವರು ಮೇ 4ರಿಂದಲೇ ಅಭ್ಯಾಸ ಆರಂಭಿಸಿದ್ದರು. ಅದೇ ದಿನ ರೊನಾಲ್ಡೊ ಅವರು ಪೋರ್ಚುಗಲ್‌ನಿಂದ ಇಟಲಿಗೆ ಬಂದಿದ್ದರು. ಟ್ಯೂರಿನ್‌ನಲ್ಲಿರುವ ತಮ್ಮ ವಿಲ್ಲಾದಲ್ಲಿ 14 ದಿನಗಳ ಪ್ರತ್ಯೇಕ ವಾಸದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.