ADVERTISEMENT

ಡುರಾಂಡ್ ಕಪ್‌ ಫುಟ್‌ಬಾಲ್‌: ನಾರ್ತ್‌ಈಸ್ಟ್‌ಗೆ ಪ್ರಶಸ್ತಿ

ಪಿಟಿಐ
Published 31 ಆಗಸ್ಟ್ 2024, 23:30 IST
Last Updated 31 ಆಗಸ್ಟ್ 2024, 23:30 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಕೋಲ್ಕತ್ತ: ಟೈಬ್ರೇಕರ್‌ನಲ್ಲಿ ಗೋಲ್‌ಕೀಪರ್‌ ಗುರ್ಮೀತ್‌ ಸಿಂಗ್‌ ಅವರ ಅಮೋಘ ಪ್ರದರ್ಶನದಿಂದ ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡ, ಡುರಾಂಡ್ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಮೋಹನ್ ಬಾಗನ್ ತಂಡವನ್ನು ಶನಿವಾರ ಟೈಬ್ರೇಕರ್‌ನಲ್ಲಿ ಸೋಲಿಸಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.

ನಿಗದಿ ಅವಧಿಯ ಆಟ ಮುಗಿದಾಗ ಸ್ಕೋರ್ 2–2 ಸಮನಾಗಿತ್ತು. ಟೈಬ್ರೇಕರ್‌ನಲ್ಲಿ, 24 ವರ್ಷ ವಯಸ್ಸಿನ ಗುರ್ಮೀತ್ ಅವರ ಕೆಲವು ತಡೆಗಳಿಂದ ನಾರ್ತ್‌ಈಸ್ಟ್‌ ತಂಡ 4–3 ಗೋಲುಗಳಿಂದ ಜಯಗಳಿಸಿತು.‌ಬಾಗನ್‌ ತಂಡದ ಲಿಸ್ಟನ್‌ ಕೊಲಾಕೊ, ನಾಯಕ ಸುಭಾಸಿಶ್‌ ಬೋಸ್‌ ಅವರ ಗೋಲು ಯತ್ನಗಳನ್ನು ಗುರ್ಮೀತ್ ತಡೆದರು. ಗಿಲೆರ್ಮೊ ಫೆರ್ನಾಂಡಿಸ್‌, ನಾಯಕ ಮಿಗೆಲ್‌ ಝಬಾಕೊ ಟೋಮ್‌, ಪಾರ್ಥಿವ್‌ ಗೊಗೊಯಿ ಮತ್ತು ಅಲಾದ್ದೀನ್‌ ಅಜರೇಯಿ ಅವರು ನಾರ್ತ್‌ಈಸ್ಟ್‌ ಪರ ಚೆಂಡನ್ನು
ಗುರಿತಲುಪಿಸಿದರು.

ADVERTISEMENT

ಜೇಸನ್ ಕಮಿಂಗ್ಸ್‌, ಮನ್ವೀರ್‌ ಸಿಂಗ್ ಮತ್ತು ದಿಮಿತ್ರಿ ಪೆಟ್ರಾಟೊಸ್‌ ಬಾಗನ್ ಪರ ಯಶ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.