ADVERTISEMENT

ಅನುಚಿತ ವರ್ತನೆ: ಅರ್ಜೆಂಟೀನಾ ವಿರುದ್ಧ ಫಿಫಾ ಶಿಸ್ತು ಕ್ರಮ ಸಾಧ್ಯತೆ

ಪಿಟಿಐ
Published 14 ಜನವರಿ 2023, 6:27 IST
Last Updated 14 ಜನವರಿ 2023, 6:27 IST
ಎಮಿಲಿಯಾನೊ ಮಾರ್ಟಿನೆಜ್
ಎಮಿಲಿಯಾನೊ ಮಾರ್ಟಿನೆಜ್   

ಪ್ಯಾರಿಸ್: ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವಿಜಯೋತ್ಸವದ ವೇಳೆ ಅರ್ಜೆಂಟೀನಾ ತಂಡದ ಆಟಗಾರರ ಅನುಚಿತ ವರ್ತನೆ ಸಂಬಂಧಿಸಿದಂತೆ ಫಿಫಾ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಆಟಗಾರರ ನಡವಳಿಕೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವುದಾಗಿ ಫಿಫಾ ಹೇಳಿದೆ.

ಕಳೆದ ತಿಂಗಳು ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿದ್ದ ಅರ್ಜೆಂಟೀನಾ ಮೂರನೇ ಬಾರಿಗೆ ಪ್ರಶಸ್ತಿ ಜಯಿಸಿತ್ತು.

ADVERTISEMENT

ಗೆಲುವಿನ ಬಳಿಕ ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್, ಟ್ರೋಫಿ ಹಿಡಿದುಕೊಂಡು ಅಶ್ಲೀಲ ಸನ್ನೆ ಮಾಡಿದ್ದರು. ಬಳಿಕ ಡ್ರೆಸ್ಸಿಂಗ್ ಕೊಠಡಿಯಲ್ಲಿ ಫ್ರಾನ್ಸ್‌ನ ತಾರೆ ಕಿಲಿಯಾನ್ ಎಂಬಾಪೆ ಅವರನ್ನು ಅಪಹಾಸ್ಯ ಮಾಡಿದ್ದರು.

ಅರ್ಜೆಂಟೀನಾ ಆಟಗಾರರ ವರ್ತನೆ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.