ADVERTISEMENT

ಫುಟ್‌ಬಾಲ್‌ ಪಂದ್ಯಾವಳಿ: ಸಿಸಿಎಫ್‌ಸಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 12:57 IST
Last Updated 17 ಆಗಸ್ಟ್ 2019, 12:57 IST

ಪ್ರಜಾವಾಣಿ ವಾರ್ತೆ

ಮಡಿಕೇರಿ: ಇಲ್ಲಿನ ಬ್ಲೂಟೈಗರ್ಸ್ ಚೆಟ್ಟಳ್ಳಿ ಫುಟ್‌ಬಾಲ್‌ ಕ್ಲಬ್, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಸಿಸಿಎಫ್‌ಸಿ ಕಾಫಿ ಬೋರ್ಡ್ ತಂಡವು ಸಿಟಿ ಸ್ಪೋರ್ಟ್ಸ್‌ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು.ಸಿಟಿ‌ ಸ್ಪೋರ್ಟ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿ ಫೈನಲ್ ಪಂದ್ಯವು ಬ್ಲೂಟೈಗರ್ಸ್ ಹಾಗೂ ಸಿಸಿಎಫ್‌ಸಿ ಕಾಫಿ ಬೋರ್ಡ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸಿಸಿಎಫ್‌ಸಿ ತಂಡವು 5–0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ADVERTISEMENT

ಎರಡನೇ ಸೆಮಿಫೈನಲ್‌ನಲ್ಲಿ ಸಿಟಿ ಸ್ಪೋರ್ಟ್‌ ಮಡಿಕೇರಿ ಹಾಗೂ ಬ್ಲೂಟೈಗರ್ಸ್ ‘ಬಿ’ ತಂಡಗಳ ನಡುವೆ ನಡೆಯಿತು.
ಜಿದ್ದಾಜಿದ್ದಿನ ಸೆಮಿಫೈನಲ್‌ನಲ್ಲಿ ಕೊನೇ ಸಮಯದಲ್ಲಿ ಸಿ‌ಟಿ‌ ಸ್ಪೋರ್ಟ್ಸ್ ತಂಡದ ನೌಷಾದ್ ಅವರ ಅಮೋಘ ಪಾಸಿನ ನೆರವಿನಿಂದ ತಂಡ ನಾಯಕ ಇಬ್ರಾಹಿಂ ಗೋಲು ಗಳಿಸಿದರು.

ಸಿಟಿ‌ ಸ್ಪೋರ್ಟ್ಸ್‌ ಮಡಿಕೇರಿ ತಂಡವು 1–0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ, ಫೈನಲ್ ಪ್ರವೇಶಿಸಿತು. ಅತೀ ಹೆಚ್ಚು‌ ಅಂಕ ಗಳಿಸಿದ ಪ್ರಶಸ್ತಿಯನ್ನು ಸಿಸಿಎಫ್‌ಸಿ ತಂಡದ ನಾಯಕ ಸುರೇಶ್ ಪಡೆದರು. ಪ್ರಥಮ ಸ್ಥಾನ ಪಡೆದ ಸುರೇಶ್ ನಾಯಕತ್ವದ ತಂಡದಲ್ಲಿ ಹರ್ಷಿತ್,‌ ಆಶಿಕ್, ದೀಕ್ಷಿತ್, ಫಯಾಸ್, ಸುದೀಶ್, ವಿನೋದ್ ಇದ್ದರು.

ದ್ವಿತೀಯ ಸ್ಥಾನ ಪಡೆದ ಸಿಟಿ ಸ್ಪೋರ್ಟ್ಸ್ ಇಬ್ರಾಹಿಂ ನಾಯಕತ್ವದ ತಂಡದಲ್ಲಿ ದಿನೇಶ್, ಆಲಿ, ಇಸ್ಮಾಯಿಲ್ ಕಂಡಕರೆ , ರಶೀದ್, ಫಾರೂಖ್, ಜಂಶೀದ್ ಹಾಗೂ ನೌಷಾದ್ ಇದ್ದರು.

15 ತಂಡಗಳು ಭಾಗಿ:

ವಿನೋದ್, ರಹೀಂ, ಪ್ರೀತಂ, ಆಲಿ, ವಿರೂಪಾಕ್ಷ, ಇಸ್ಮಾಯಿಲ್ ಕಂಡಕರೆ ಹಾಗೂ ಜಂಶಾದ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಗುತ್ತಿಗೆದಾರರಾದ ಅಂಬುದಾಸ್, ಬ್ಲೂಟೈಗರ್ಸ್ ತಂಡದ ಅಧ್ಯಕ್ಷ ರಫೀಕ್, ದಾನಿಗಳಾದ ಬಶೀರ್, ಸಿಟಿ ಸ್ಪೋರ್ಟ್ಸ್‌ ಮಾಲೀಕ‌ ಫಾರೂಖ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.