ADVERTISEMENT

Paris Olympics | ಫುಟ್‌ಬಾಲ್‌: ಫೈನಲ್‌ಗೆ ಫ್ರಾನ್ಸ್‌, ಸ್ಪೇನ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 23:21 IST
Last Updated 6 ಆಗಸ್ಟ್ 2024, 23:21 IST
<div class="paragraphs"><p>ಗೋಲು ಗಳಿಸಿದ ಸಂಭ್ರಮದಲ್ಲಿ ಫ್ರಾನ್ಸ್‌ ತಂಡದ ಆಟಗಾರರು </p></div>

ಗೋಲು ಗಳಿಸಿದ ಸಂಭ್ರಮದಲ್ಲಿ ಫ್ರಾನ್ಸ್‌ ತಂಡದ ಆಟಗಾರರು

   

ಪ್ಯಾರಿಸ್‌ : ಜೀನ್ ಫಿಲೀಪ್ ಮಾಟೆಟಾ ಗಳಿಸಿದ ಎರಡು ಗೋಲುಗಳ ಬಲದಿಂದ ಆತಿಥೇಯ ಫ್ರಾನ್ಸ್‌ ತಂಡವು ಒಲಿಂಪಿಕ್ಸ್‌ನ ಪುರುಷರ ಫುಟ್‌ಬಾಲ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಚಿನ್ನದ ಪದಕಕ್ಕಾಗಿ ಶುಕ್ರವಾರ ಟೋಕಿಯೊ ಒಲಿಂಪಿಕ್ಸ್‌ನ ರನ್ನರ್‌ ಅಪ್‌ ಸ್ಪೇನ್‌ ವಿರುದ್ಧ ಸೆಣಸಾಟ ನಡೆಸಲಿವೆ.

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಆತಿಥೇಯ ಫ್ರಾನ್ಸ್ ತಂಡವು ಹೆಚ್ಚುವರಿ ಅವಧಿಯಲ್ಲಿ ಎರಡು ಗೋಲು ದಾಖಲಿಸಿ, 3–1ರಿಂದ ಈಜಿಪ್ಟ್ ತಂಡವನ್ನು ಮಣಿಸಿತು.

ADVERTISEMENT

ಪಂದ್ಯದ 83ನೇ ಮತ್ತು 99ನೇ ನಿಮಿಷದಲ್ಲಿ ಮಾಟೆಟಾ ಚೆಂಡನ್ನು ಗುರಿ ಸೇರಿಸಿ ಫ್ರಾನ್ಸ್‌ ತಂಡದ ಗೆಲುವಿನ ರೂವಾರಿಯಾದರು. ಮತ್ತೊಂದು ಗೋಲನ್ನು ಮೈಕೆಲ್ ಅಕ್ಪೋವಿ ಒಲಿಸ್ (108ನೇ ನಿಮಿಷ) ದಾಖಲಿಸಿದರು. ಈಜಿಪ್ಟ್‌ ಪರ ಏಕೈಕ ಗೋಲನ್ನು ಮೊಹಮ್ಮದ್ ಸಾಬರ್  (62ನೇ ನಿ) ತಂದಿತ್ತರು.

ಇದಕ್ಕೂ ಮೊದಲು ನಡೆದ ಮತ್ತೊಂದು ಸೆಮಿಫೈನಲ್‌ನ ರೋಚಕ ಹಣಾಹಣಿಯಲ್ಲಿ ಯುರೋ ಕಪ್ ಚಾಂಪಿಯನ್‌ ಸ್ಪೇನ್‌ ತಂಡವು 2–1ರಿಂದ ಟೋಕಿಯೊದಲ್ಲಿ ಕಂಚು ಗೆದ್ದಿದ್ದ ಮೊರಾಕ್ಕೊ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತು.

ಸ್ಪೇನ್‌ ಪರ ಫರ್ಮಿನ್ ಲೋಪೆಜ್ (65ನೇ ನಿ) ಮತ್ತು ಜುವಾನ್ಲು ಸ್ಯಾಂಚೆಜ್ (85ನೇ ನಿ) ಗೋಲು ಗಳಿಸಿದರು. ಸೋಫಿನ್‌ ರಹಿಮಿ (37ನೇ ನಿ) ಅವರು ಮೊರಕ್ಕೊ ಪರ ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.