ಜಮ್ಶೆಡ್‌ಪುರ: ಇಲ್ಲಿನ ಜೆಆರ್‌ಡಿ ಟಾಟಾ ಕ್ರೀಡಾಂಗಣದಲ್ಲಿ ನಡೆಯುವ, ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಎಲ್ಲ ಪಂದ್ಯಗಳಿಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಡುರಾಂಡ್ ಕಪ್ ಆಯೋಜನಾ ಸಮಿತಿಯು ಶುಕ್ರವಾರ ಈ ಬಗ್ಗೆ ಘೋಷಣೆ ಮಾಡಿದೆ.
ಜುಲೈ 24ರಂದು ನಡೆಯುವ ಮೊದಲ ಪಂದ್ಯದ ಟಿಕೆಟ್‌ಗಳನ್ನು, ಕ್ರೀಡಾಂಗಣದ ಬಾಕ್ಸ್ ಆಫೀಸ್‌ನಲ್ಲಿ 23 ಹಾಗೂ 24ರಂದು ಉಚಿತವಾಗಿ ವಿತರಿಸಲಾಗುವುದು. ಒಬ್ಬರಿಗೆ ಗರಿಷ್ಠ ನಾಲ್ಕು ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಎರಡನೇ ಪಂದ್ಯದಿಂದ ಕ್ರೀಡಾಂಗಣಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗುವುದು. ಸಾರ್ವಜನಿಕರು ಟಿಕೆಟ್ ಇಲ್ಲದೆಯೇ 4, 5, 6 ಮತ್ತು 7ನೇ ಗೇಟ್ ಮೂಲಕ ಕ್ರೀಡಾಂಗಣ ಪ್ರವೇಶಿಸಬಹುದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.