
ಪಿಟಿಐ
ಫುಟ್‌ಬಾಲ್
ಕೋಲ್ಕತ್ತ: ಗಢವಾಲ್ ಯುನೈಟೆಡ್ ತಂಡವು, ಭಾರತ ಮಹಿಳಾ ಲೀಗ್‌ನಲ್ಲಿ (ಐಡಬ್ಲ್ಯುಎಲ್) ಬುಧವಾರ ಬೆಂಗಳೂರಿನ ಕಿಕ್‌ಸ್ಟಾರ್ಟ್ ಫುಟ್‌ಬಾಲ್ ತಂಡವನ್ನು 1–0 ಗೋಲಿನಿಂದ ಸೋಲಿಸಿತು.
ಲಿಂಗ್ದೀಕಿಮ್ (79ನೇ ನಿಮಿಷ) ಅವರು ನಿರ್ಣಾಯಕ ಗೋಲು ಗಳಿಸಿದರು. ಈ ಎರಡನೇ ಗೆಲುವಿನೊಡನೆ ಗಢವಾಲ್ ತಂಡ ಪಾಯಿಂಟ್ ಪಟ್ಟಿಯಲ್ಲಿ 6 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೇರಿತು. ನೀತಾ ಫುಟ್‌ಬಾಲ್ ಅಕಾಡೆಮಿ ಎರಡನೇ ಸ್ಥಾನದಲ್ಲಿದೆ.
ಶ್ರೀಭೂಮಿ ತಂಡ ಕಲ್ಯಾಣಿಯಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಗೋಕುಲಂ ಕೇರಳ ಎಫ್‌ಸಿ ತಂಡವನ್ನು 4–0 ಗೋಲುಗಳಿಂದ ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.