ಭಾರತ ಫುಟ್‌ಬಾಲ್ ತಂಡದ ಆಟಗಾರರು
ಕೃಪೆ: X/@IndianFootball
ನವದೆಹಲಿ: ಫಿಫಾ ರ್‍ಯಾಂಕಿಂಗ್ ಪಟ್ಟಿಯಲ್ಲಿ ಆರು ಸ್ಥಾನಗಳ ಕುಸಿತ ಕಂಡಿರುವ ಭಾರತ ಫುಟ್‌ಬಾಲ್ ತಂಡವು 133ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದು, ಟೀಂ ಇಂಡಿಯಾ ಪಾಲಿಗೆ ಕಳೆದ 9 ವರ್ಷಗಳಲ್ಲೇ ಕಳಪೆ ರ‌್ಯಾಂಕ್ ಆಗಿದೆ.
ಥೈಲ್ಯಾಂಡ್ ವಿರುದ್ಧ ಜೂನ್ 4ರಂದು ನಡೆದ ಸೌಹಾರ್ದ ಪಂದ್ಯದಲ್ಲಿ (0–2) ಮುಖಭಂಗ ಅನುಭವಿಸಿದ್ದ ಭಾರತ, ಜೂನ್ 10ರಂದು ಏಷ್ಯಾಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಂಗ್‌ಕಾಂಗ್ ಎದುರು 0–1 ಅಂತರದ ಸೋಲು ಕಂಡಿತ್ತು. ಹೀಗಾಗಿ, ರ್‍ಯಾಂಕಿಂಗ್‌ನಲ್ಲಿ ಆರು ಸ್ಥಾನಗಳ ಕುಸಿತ ಅನುಭವಿಸಿದೆ.
2016ರ ಡಿಸೆಂಬರ್‌ನಲ್ಲಿ 135ನೇ ಸ್ಥಾನದಲ್ಲಿದ್ದ ಭಾರತ, ಕಳೆದ 9 ವರ್ಷಗಳಲ್ಲಿ ಒಮ್ಮೆಯೂ 130ಕ್ಕಿಂತ ಕೆಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿರಲಿಲ್ಲ. 1996ರ ಫೆಬ್ರುವರಿಯಲ್ಲಿ 94ನೇ ಸ್ಥಾನಕ್ಕೆ ಏರಿದ್ದು ಶ್ರೇಷ್ಠ ಸಾಧನೆಯಾಗಿತ್ತು.
ರಷ್ಯಾ ರಾಷ್ಟ್ರಗಳ ಪೈಕಿ ಜಪಾನ್ 17ನೇ ಸ್ಥಾನದಲ್ಲಿದೆ.
ಒಟ್ಟಾರೆಯಾಗಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಸ್ಪೇನ್, ಫ್ರಾನ್ಸ್, ಇಂಗ್ಲೆಂಡ್, ಬ್ರೆಜಿಲ್, ಪೋರ್ಚುಗಲ್, ನೆದರ್ಲೆಂಡ್ಸ್, ಬೆಲ್ಜಿಯಂ, ಜರ್ಮನಿ ಹಾಗೂ ಕ್ರೊವೇಷ್ಯಾ ತಂಡಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.