ADVERTISEMENT

ಫಿಫಾ ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲೇರಿದ ಭಾರತ ತಂಡ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 11:29 IST
Last Updated 23 ಜೂನ್ 2022, 11:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿರುವ ಭಾರತ ತಂಡ ಇದೀಗ ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲೇರಿ 104ಕ್ಕೆ ತಲುಪಿದೆ.

ಇದೇ ತಿಂಗಳು ನಡೆದ ಏಷ್ಯಾಕಪ್‌ ಅರ್ಹತಾ ಅಭಿಯಾನದಲ್ಲಿ ಸುನಿಲ್‌ ಚೆಟ್ರಿ ನೇತೃತ್ವದ ಭಾರತ ತಂಡ ಅಮೋಘ ಪ್ರದರ್ಶನ ತೋರಿತ್ತು. ಆಡಿದ ಮೂರೂ ಪಂದ್ಯಗಳನ್ನು ಗೆಲ್ಲುವುದರೊಂದಿಗೆ 24 ತಂಡಗಳ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.

ಏಷ್ಯಾಕಪ್‌ ಟೂರ್ನಿಗೆ ಭಾರತ ಅರ್ಹತೆ ಗಳಿಸಿರುವುದು ಇದು ಐದನೇ ಬಾರಿ. ಆದರೆ, ಇದೇ ಮೊದಲ ಸಲ ಸತತ ಎರಡನೇ ಬಾರಿಗೆ ಏಷ್ಯಾಕಪ್‌ ಆಡಲಿರುವುದು ವಿಶೇಷ.

ADVERTISEMENT

ಒಟ್ಟಾರೆ ಫಿಫಾ ರ‍್ಯಾಂಕಿಂಗ್‌ನಲ್ಲಿ ಬ್ರೆಜಿಲ್‌ ಮೊದಲ ಸ್ಥಾನದಲ್ಲಿದೆ. ಬೆಲ್ಜಿಯಂ, ಅರ್ಜೆಂಟಿನಾ ಹಾಗೂ ಫ್ರಾನ್ಸ್‌ ಕ್ರಮವಾಗಿ 2, 3 ಮತ್ತು 4ನೇ ಸ್ಥಾನಗಳಲ್ಲಿ ಇವೆ.

ಉಳಿದಂತೆ, 5 ರಿಂದ 10ನೇ ಸ್ಥಾನದ ವರೆಗೆ ಇಂಗ್ಲೆಂಡ್‌, ಸ್ಪೇನ್‌, ಇಟಲಿ, ನೆದರ್ಲೆಂಡ್ಸ್‌, ಪೋರ್ಚುಗಲ್‌ ಹಾಗೂ ಡೆನ್ಮಾರ್ಕ್‌ ಕಾಣಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.