ADVERTISEMENT

ಐಎಸ್‌ಎಲ್: ಗೋವಾ ಜಯಭೇರಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 21:25 IST
Last Updated 30 ಡಿಸೆಂಬರ್ 2020, 21:25 IST

ವಾಸ್ಕೋ: ಆತಿಥೇಯ ಗೋವಾ ಫುಟ್‌ ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಬುಧವಾರ ಜಯಭೇರಿ ಬಾರಿಸಿತು.

ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡವು 2–1 ಗೋಲುಗಳಿಂದ ಹೈದರಾಬಾದ್ ಎಫ್‌ಸಿ ವಿರುದ್ಧ ಜಯಿಸಿತು.

ಆ್ಯಂದನೆ ಸಂತಾನಾ 56ನೇ ನಿಮಿಷದಲ್ಲಿ ಗೋಲು ಗಳಿಸಿದ್ದರಿಂದ ಹೈದರಾಬಾದ್ ತಂಡವು 1–0 ಮುನ್ನಡೆ ಗಳಿಸಿತ್ತು. ಆದರೆ, ಇಶಾನ್ ಪಂಡಿತ್ (87ನೇ ನಿ) ಮತ್ತು ಇಗೋರ್ ಆ್ಯಂಗೊಲೊ (90+1ನಿ) ಹೊಡೆದ ಗೋಲುಗಳಿಂದಾಗಿ ಗೋವಾ ತಂಡವು ಜಯಿಸಿತು. 14 ಅಂಕಗಳನ್ನು ಗಳಿಸಿರುವ ಗೋವಾ ಈಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಹೈದರಾಬಾದ್ ತಂಡವು 9 ಪಾಯಿಂಟ್ಸ್‌ನೊಂದಿಗೆ ಎಂಟನೇ ಸ್ಥಾನದಲ್ಲಿದೆ.

ADVERTISEMENT

ಮುಂದಿನ ಪಂದ್ಯ ಜನವರಿ ಎರಡರಂಡು ನಡೆಯಲಿದ್ದು ಮುಂಬೈ ಸಿಟಿ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.