ADVERTISEMENT

ಸ್ಯಾಫ್‌: ಭಾರತ ಮಹಿಳೆಯರಿಗೆ ಚಾಂಪಿಯನ್ ಪಟ್ಟ

ಪಿಟಿಐ
Published 25 ಮಾರ್ಚ್ 2022, 19:32 IST
Last Updated 25 ಮಾರ್ಚ್ 2022, 19:32 IST
ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಭಾರತ 18 ವರ್ಷದೊಳಗಿನ ಮಹಿಳಾ ತಂಡ –ಟ್ವಿಟರ್ ಚಿತ್ರ
ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಭಾರತ 18 ವರ್ಷದೊಳಗಿನ ಮಹಿಳಾ ತಂಡ –ಟ್ವಿಟರ್ ಚಿತ್ರ   

ಜೆಮ್ಶೆಡ್‌ಪುರ: ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಮಣಿದರೂ ಭಾರತ ತಂಡ ಸ್ಯಾಫ್‌ 18 ವರ್ಷದೊಳಗಿನ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಉತ್ತಮ ಗೋಲು ಸರಾಸರಿ ಭಾರತದ ಕೈ ಹಿಡಿಯಿತು.

ಶುಕ್ರವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತವನ್ನು ಬಾಂಗ್ಲಾದೇಶ 1–0ಯಿಂದ ಸೋಲಿಸಿತು. ಇದರೊಂದಿಗೆ ಎರಡೂ ತಂಡಗಳ ಪಾಯಿಂಟ್‌ಗಳು ಸಮ ಆದವು. ಆದರೆ ಭಾರತ+11 ಗೋಲು ಸರಾಸರಿ ಹೊಂದಿತ್ತು. ಬಾಂಗ್ಲಾದೇಶದ ಸರಾಸರಿ ಗೋಲು+3 ಆಗಿತ್ತು. ಒಟ್ಟು ಐದು ಗೋಲು ಗಳಿಸಿದ ಲಿಂಡಾ ಕೋಮ್ ಟೂರ್ನಿಯ ಉತ್ತಮ ಆಟಗಾರ್ತಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪಂದ್ಯದ ಐದನೇ ನಿಮಿಷದಲ್ಲಿ ಭಾರತದ ಶುಭಾಂಗಿ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ಪಾಳಯದಲ್ಲಿ ಆತಂಕ ಉಂಟುಮಾಡಿದರು. ಅವಕಾಶ ಸೃಷ್ಟಿಸಿ ಅವರು ಒದ್ದ ಚೆಂಡು ಬಾಂಗ್ಲಾ ಗೋಲ್‌ಕೀಪರ್ ರೂಪ್ನಾ ಅವರ ಕೈ ಸೇರಿತು. 40ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಅಮೋಘ ಅವಕಾಶ ಲಭಿಸಿತ್ತು. ಆದರೆ ನೀತು ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. 60ನೇ ನಿಮಿಷದಲ್ಲಿ ನಾಯಕಿ ಶಿಲ್ಕಿ ದೇವಿ ಅವರ ಪ್ರಯತ್ನವನ್ನೂ ರೂಪ್ನಾ ವಿಫಲಗೊಳಿಸಿದರು.

ADVERTISEMENT

ಬಾಂಗ್ಲಾದೇಶದ ಪ್ರಿಯಾಂಕ 74ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ತಂಡದಲ್ಲಿ ಸಂಭ್ರಮ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.