ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ತವರಿನಲ್ಲಿ ಪಂದ್ಯ ಆಡಲಿರುವ ಒಡಿಶಾ

ಫುಟ್‌ಬಾಲ್

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 11:50 IST
Last Updated 14 ಡಿಸೆಂಬರ್ 2019, 11:50 IST
   

ಭುವನೇಶ್ವರ: ಒಡಿಶಾ ಎಫ್‌ಸಿ ತಂಡವು ಇದೇ ತಿಂಗಳ 27ರಿಂದ ಕಳಿಂಗ ಕ್ರೀಡಾಂಗಣದಲ್ಲಿ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯಗಳನ್ನು ಆಡಲಿದೆ.

2020ರಲ್ಲಿ ಆಯೋಜನೆಯಾಗಿರುವ ಫಿಫಾ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗಾಗಿ ಕಳಿಂಗ ಕ್ರೀಡಾಂಗಣವನ್ನು ನವೀಕರಣ ಮಾಡಲಾಗುತ್ತಿತ್ತು. ಹೀಗಾಗಿ ತವರಿನ ಮೈದಾನದಲ್ಲಿ ನಡೆಯಬೇಕಾಗಿದ್ದ ಮೊದಲ ಮೂರು ಪಂದ್ಯಗಳನ್ನು ‍ಪುಣೆಯ ಶಿವಛತ್ರಪತಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು.

27 ರಂದು ನಡೆಯುವ ಪಂದ್ಯದಲ್ಲಿ ಒಡಿಶಾ ತಂಡ ಜೆಮ್‌ಶೆಡ್‌ಪುರ ಎಫ್‌ಸಿ ಸವಾಲು ಎದುರಿಸಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.