ADVERTISEMENT

ಐಎಸ್‌ಎಲ್‌: ಬಿಎಫ್‌ಸಿಗೆ ಸೋಲು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಕಣಕ್ಕೆ ಇಳಿಯದ ಸುನಿಲ್ ಚೆಟ್ರಿ

ಪಿಟಿಐ
Published 15 ಫೆಬ್ರುವರಿ 2020, 19:45 IST
Last Updated 15 ಫೆಬ್ರುವರಿ 2020, 19:45 IST
ಕೇರಳ ಬ್ಲಾಸ್ಟರ್ಸ್ ಪರ ಒಗ್ಬೆಚೆ ಗೋಲು ಗಳಿಸಿದ ಸಂದರ್ಭ
ಕೇರಳ ಬ್ಲಾಸ್ಟರ್ಸ್ ಪರ ಒಗ್ಬೆಚೆ ಗೋಲು ಗಳಿಸಿದ ಸಂದರ್ಭ   

ಕೊಚ್ಚಿ:ಬಾರ್ತಲೋಮ ಒಗ್ಬೆಚೆ ಅವರನ್ನು ನಿಯಂತ್ರಿಸಲು ವಿಫಲವಾದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಇಲ್ಲಿ ಶನಿವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ಗೆ 1–2ರಲ್ಲಿ ಮಣಿಯಿತು.

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಒಗ್ಬೆಚೆ 45 ಮತ್ತು 72ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಬಿಎಫ್‌ಸಿ ಪರ ದೇಶಾನ್ ಬ್ರೌನ್ (16ನೇ ನಿಮಿಷ) ಗೋಲು ಗಳಿಸಿದರು.

ಎಟಿಕೆಗೆ ಚೆನ್ನೈಯಿನ್ ಸವಾಲು: ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ತಂಡ ಚೆನ್ನೈಯಿನ್ ಎಫ್‌ಸಿ ಎದುರು ಸೆಣಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.