ADVERTISEMENT

ವೇತನ ಕಡಿತ ಖಚಿತಪಡಿಸಿದ ಮೆಸ್ಸಿ

ಏಜೆನ್ಸೀಸ್
Published 31 ಮಾರ್ಚ್ 2020, 19:45 IST
Last Updated 31 ಮಾರ್ಚ್ 2020, 19:45 IST
ಲಯೊನೆಲ್ ಮೆಸ್ಸಿ
ಲಯೊನೆಲ್ ಮೆಸ್ಸಿ   

ಮ್ಯಾಡ್ರಿಡ್: ಕೊರೊನಾ ವೈರಸ್ ಹಾವಳಿಯಿಂದ ಜರ್ಜರಿತವಾಗಿರುವ ಸ್ಪೇನ್ ದೇಶದ ಫುಟ್‌ಬಾಲ್ ಕ್ಲಬ್‌ಗಳು ತನ್ನ ಆಟಗಾರರ ವೇತನ ಕಡಿತ ಮಾಡಲು ಮುಂದಾಗಿವೆ.

ಪ್ರತಿಷ್ಠಿತ ಬಾರ್ಸಿಲೋನಾ ಕ್ಲಬ್‌ ಕೂಡ ಇದೇ ನೀತಿ ಅನುಸರಿಸುತ್ತಿದೆ. ಕ್ಲಬ್‌ನ ಎಲ್ಲ ಆಟಗಾರರ ವೇತನಕ್ಕೆ ಕತ್ತರಿ ಬೀಳಲಿದೆ ಎಂದು ತಂಡದ ತಾರಾ ಆಟಗಾರ ಲಯೊನೆಲ್ ಮೆಸ್ಸಿ ದೃಢಪಡಿಸಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈಗ ನಮಗೆ ಸಮಯ ಬಂದಿದೆ. ಸುಮಾರು ಶೇ 70ರಷ್ಟು ವೇತನ ಕಡಿತವಾಗುವುದು ಖಚಿತವಾಘಿದೆ. ಇದರೊಂದಿಗೆ ನಾವು ದೇಣಿಗೆಯನ್ನೂ ನೀಡೋಣ. ಅದರಿಂದ ಕ್ಲಬ್‌ ಉದ್ಯೋಗಿಗಳು ತಮ್ಮಸಂಪೂರ್ಣ ವೇತನ ಪಡೆಯುವಂತಾಗುತ್ತದೆ. ತೊಂದರೆಗಳು ಎದುರಾದಾಗಲೆಲ್ಲ ನಾವು ಸಹಾಯಕ್ಕೆ ಧಾವಿಸಿದ್ದೇವೆ. ನಮ್ಮಿಂದಾದ ನೆರವನ್ನು ಯಾವಾಗಲೂ ನೀಡಿದ್ದೇವೆ. ಈಗಂತೂ ತುಂಬಾ ಕ್ಲಿಷ್ಟ ಸಮಯ ಇದೆ. ನಮಗೂ ಏನು ಸಹಾಯ ಮಾಡಬೇಕು ಎಂಬ ಅರಿವು ಇದೆ. ಆದರೆ ಆಡಳಿತ ಮಂಡಳಿಯು ಒತ್ತಾಯಪೂರ್ವಕವಾಗಿ ವೇತನ ಕಡಿತ ಮಾಡಲು ಮುಂದಾಗಿರುವುದು ಮುಜುಗರ ಮೂಡಿಸುತ್ತಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಸ್ಸಿ ಬರೆದಿದ್ದಾರೆ.

ADVERTISEMENT

ಕಳೆದ ಕೆಲವು ತಿಂಗಳುಗಳಿಂದ ಕ್ಲಬ್ ಆಟಗಾರರು ಮತ್ತು ಆಡಳಿತ ಮಂಡಳಿಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.