
ಫುಟ್‌ಬಾಲ್
ಕೋಲ್ಕತ್ತ: ಕ್ಲಬ್ ಅಭಿಮಾನಿಗಳ ದುರ್ವರ್ತನೆಯ ಕಾರಣ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ಶಿಸ್ತು ಸಮಿತಿಯು ಮೋಹನ್ ಬಾಗನ್ ಸೂಪರ್ ಜೈಂಟ್ಸ್‌ಗೆ ದಂಡ ವಿಧಿಸಿದೆ. ಜೊತೆಗೆ ಒಡಿಶಾ ಎಫ್‌ಸಿ ಎದುರಿನ ಮುಂದಿನ ಪಂದ್ಯವನ್ನು ಖಾಲಿ ಕ್ರೀಡಾಂಗಣದಲ್ಲಿ ಆಡಬೇಕೆಂದೂ ಸೂಚನೆ ನೀಡಿದೆ.
ಫೆ. 14ರಂದು ಕೇರಳ ಬ್ಲಾಸ್ಟರ್ಸ್ ಎದುರಿನ ತವರು ಪಂದ್ಯದ ವೇಳೆ ಬಾಗನ್ ಅಭಿಮಾನಿಗಳು ಅತಿರೇಖದಿಂದ ವರ್ತಿಸಿದ್ದರು.
ದಂಡವನ್ನು ಪಾವತಿಸಲು ಕ್ಲಬ್ ಒಪ್ಪಿಕೊಂಡಿದೆ. ದಂಡದ ಮೊತ್ತ ಬಹಿರಂಗಪಡಿಸಿಲ್ಲ. ಮಾರ್ಚ್ 6ರಂದು ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವನ್ನು ಖಾಲಿ ಕ್ರೀಡಾಂಗಣದಲ್ಲಿ ಆಡಬೇಕೆಂಬ ಸೂಚನೆ ವಿರುದ್ಧ ಅದು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ.
‘ಪಂದ್ಯವನ್ನು ಖಾಲಿ ಕ್ರೀಡಾಂಗಣದಲ್ಲಿ ಆಡಿಸಬೇಕೆಂಬ ಎಐಎಎಫ್‌ಎಫ್‌ನ ಶಿಸ್ತು ಸಮಿತಿಯ ನಿರ್ಧಾರದಿಂದ ನಮಗೆ ತೀವ್ರ ನಿರಾಶೆಯಾಗಿದೆ’ ಎಂದು ಕ್ಲಬ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.