ಬೆಂಗಳೂರು: ರೊನಾಲ್ಡೊ ಎಫ್ಸಿ ಮತ್ತು ಬೆಂಗಳೂರು ಪ್ಯಾಂಥರ್ಸ್ ಎಫ್ಸಿ ತಂಡಗಳು ರಾಜ್ಯ ಫುಟ್ಬಾಲ್ ಸಂಸ್ಥೆ (ಕೆಎಸ್ಎಫ್ಎ) ಮತ್ತು ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ (ಬಿಡಿಎಫ್ಎ) ‘ಸಿ’ ಡಿವಿಷನ್ ಲೀಗ್ನ ಪ್ರಶಸ್ತಿಗಾಗಿ ಸೆಣಸಲಿವೆ.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಬೆಂಗಳೂರು ಪ್ಯಾಂಥರ್ಸ್ 3–2ರಲ್ಲಿ ಮಹೇಶ್ ರಾಜ್ ಎಫ್ಸಿಯನ್ನು ಮಣಿಸಿದರೆ ರೊನಾಲ್ಡೊ ಎಫ್ಸಿ 2–0ಯಿಂದ ಬೆಂಗಳೂರು ಸಿಟಿ ಎಫ್ಸಿಗೆ ಸೋಲುಣಿಸಿತು.ಫೈನಲ್ ಪಂದ್ಯ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಪ್ಯಾಂಥರ್ಸ್ಗೆ ಏಳನೇ ನಿಮಿಷದಲ್ಲಿ ಪ್ರವೀಣ್ ಗೋಲಿನ ‘ಉಡುಗೊರೆ’ ನೀಡಿದರು. ರಾಜನ್ ನಾರಾಯಣನ್ (18ನೇ ನಿಮಿಷ) ಮತ್ತು ತೇಜಸ್ (46ನೇ ನಿ) ಗೋಲುಗಳನ್ನು ಗಳಿಸಿದರು. ಮಹೇಶ್ ರಾಜ್ ಎಫ್ಸಿಗಾಗಿ ಗಗನ್ ಮರ್ಕಂ ಎರಡನೇ ನಿಮಿಷದಲ್ಲೇ ಗೋಲು ಗಳಿಸಿದರು. 30ನೇ ನಿಮಿಷದಲ್ಲಿ ತೇಜಸ್ ಉಡುಗೊರೆ ಗೋಲು ನೀಡಿದರು.
ಬೆಂಗಳೂರು ಸಿಟಿ ಎಫ್ಸಿ ವಿರುದ್ಧ ರೊನಾಲ್ಡೊ ಎಫ್ಸಿಗಾಗಿ ಸಂಜು ಕುಮಾರ್ (ಮೊದಲನೇ ನಿಮಿಷ) ಮತ್ತು ಇಮ್ಯಾನ್ಯುಯೆಲ್ ಡೆರಿಕ್ (58ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.