ADVERTISEMENT

FIFA World Cup: ಟೂರ್ನಿ ವೇಳೆ ಮತ್ತೊಬ್ಬ ಪತ್ರಕರ್ತ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2022, 5:40 IST
Last Updated 12 ಡಿಸೆಂಬರ್ 2022, 5:40 IST
ಖಲೀದ್‌ ಅಲ್‌–ಮಿಸ್ಲಾಮ್‌ (ಚಿತ್ರಕೃಪೆ: Twitter / @GulfTimes_QATAR)
ಖಲೀದ್‌ ಅಲ್‌–ಮಿಸ್ಲಾಮ್‌ (ಚಿತ್ರಕೃಪೆ: Twitter / @GulfTimes_QATAR)   

ದೋಹಾ: ವಿಶ್ವಕ‍ಪ್‌ ಟೂರ್ನಿಯ ವರದಿಗೆ ಆಗಮಿಸಿದ್ದ ಅಮೆರಿಕದ ಕ್ರೀಡಾ ವರದಿಗಾರ ಗ್ರಾಂಟ್‌ ವಾಲ್‌ ಅವರು ಮೃತಪಟ್ಟು 48 ಗಂಟೆಗಳು ಕಳೆಯುವುದರೊಳಗೆ ಮತ್ತೊಬ್ಬ ಪತ್ರಕರ್ತ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಗಲ್ಫ್‌ ಟೈಮ್ಸ್‌ ಸೇರಿದಂತೆ ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಅಲ್‌ಕಾಸ್‌ ವಾಹಿನಿಯ ಫೋಟೊ ಜರ್ನಲಿಸ್ಟ್‌ ಖಲೀದ್‌ ಅಲ್‌–ಮಿಸ್ಲಾಮ್‌ ಅವರು ಡಿಸೆಂಬರ್‌ 10ರಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕತಾರ್‌ನವರೇ ಆದ ಖಲೀದ್‌ ಅವರು ಇತ್ತೀಚೆಗೆ ಹಠಾತ್ತನೆ ಮೃತಪಟ್ಟಿದ್ದಾರೆ. ದೇವರು ಅವರಿಗೆ ಕರುಣೆ ತೋರಲಿ. ಅವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇವೆ ಎಂದುಗಲ್ಫ್‌ ಟೈಮ್ಸ್‌ ಟ್ವಿಟರ್‌ ಪುಟದಲ್ಲಿ ಪೋಸ್ಟ್‌ ಹಾಕಿದೆ.

ADVERTISEMENT

ಗ್ರಾಂಟ್‌ ವಾಲ್‌ ಅವರುಶುಕ್ರವಾರ (ಡಿ.9 ರಂದು) ನಡೆದಿದ್ದ ಅರ್ಜೆಂಟೀನಾ– ನೆದರ್ಲೆಂಡ್ಸ್ ಪಂದ್ಯದ ವೇಳೆ ಕುಸಿದುಬಿದ್ದು ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆದರೆ,ಗ್ರಾಂಟ್‌ ಅವರ ಸಹೋದರ ಎರಿಕ್‌ವಾಲ್‌ ಕೊಲೆ ಆರೋಪ ಮಾಡಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ, 'ನನ್ನ ಸಹೋದರ ಆರೋಗ್ಯವಾಗಿದ್ದ. ತನಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ನನಗೆ ಹೇಳಿದ್ದ. ಅವನು ಮೃತಪಟ್ಟಿದ್ದಾನೆ ಎಂಬುದನ್ನು ನಾನು ನಂಬುವುದಿಲ್ಲ. ಕೊಲೆ ಮಾಡಲಾಗಿದೆ. ನಾನು ನೆರವಿಗಾಗಿ ಮನವಿ ಮಾಡುತ್ತೇನೆ' ಎಂದಿದ್ದಾರೆ.

ಖಲೀದ್‌ ಅವರ ಸಾವಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ಆರೋಪಗಳು ಕೇಳಿ ಬಂದಿಲ್ಲ.

ಅಮೆರಿಕ–ವೇಲ್ಸ್‌ ನಡುವಣ ನವೆಂಬರ್‌ 21 ರಂದು ನಡೆದ ಪಂದ್ಯದ ವೇಳೆ ಎಲ್‌ಜಿಬಿಟಿ ಸಮುದಾಯದವರಿಗೆ ಬೆಂಬಲ ಸೂಚಿಸುವ ಟಿ–ಶರ್ಟ್‌ ಧರಿಸಿಕೊಂಡು ಬಂದಿದ್ದಗ್ರಾಂಟ್‌ ಅವರನ್ನು ಕ್ರೀಡಾಂಗಣದ ಸಿಬ್ಬಂದಿ ತಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.