ADVERTISEMENT

ಫುಟ್‌ಬಾಲ್‌: ಕೇರಳಕ್ಕೆ ಮಣಿದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 14:36 IST
Last Updated 30 ನವೆಂಬರ್ 2023, 14:36 IST
   

ಬೆಂಗಳೂರು: ಸಾಂಘಿಕ ಆಟವಾಡಿದ ಕೇರಳದ ವನಿತೆಯರು 28ನೇ ಸೀನಿಯರ್‌ ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‘ಸಿ’ ಗುಂಪಿನ ಪಂದ್ಯದಲ್ಲಿ 3–2 ರಿಂದ ಕರ್ನಾಟಕ ತಂಡವನ್ನು ಮಣಿಸಿದರು.

ಗುರುವಾರ ನಡೆದ ಪಂದ್ಯದಲ್ಲಿ ಎಂ.ಪಿ. ಗ್ರೇಷ್ಮಾ (7ನೇ ನಿ), ಕೆ. ಮಾನಸಾ (40ನೇ), ಆರ್‌. ಆಭರಣಿ ಅವರು ಕೇರಳದ ಪರ ಗೋಲು ದಾಖಲಿಸಿದರು. ಕರ್ನಾಟಕದ ಪರ ರೋಸಿ ತಂಗಾ (42, 67ನೇ) ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಇತರ ಪಂದ್ಯದಲ್ಲಿ ಚಂಡೀಗಢ 2–0 ಯಿಂದ ತ್ರಿಪುರ ತಂಡವನ್ನು, ಸಿಕ್ಕಿಂ 3–0 ಯಿಂದ ಅಸ್ಸಾಂ ತಂಡವನ್ನು ಮಣಿಸಿದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.