
ಪಿಟಿಐ
ಫುಟ್‌ಬಾಲ್
ಢಾಕುಆಖಾನಾ (ಅಸ್ಸಾಂ): ಸರ್ವಿಸಸ್ ತಂಡವು 1–0ಯಿಂದ ಕೇರಳ ತಂಡವನ್ನು ಮಣಿಸಿ, ಸಂತೋಷ್ ಟ್ರೋಫಿಗಾಗಿ ನಡೆದ 79ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಪ್ರಶಸ್ತಿ ಗೆದ್ದುಕೊಂಡಿತು. ಸರ್ವಿಸಸ್ ತಂಡಕ್ಕೆ ಇದು 8ನೇ ಪ್ರಶಸ್ತಿಯಾಗಿದೆ.
ಢಾಕುಆಖಾನಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯ ಆಟವು ಗೋಲು ರಹಿತ ಡ್ರಾ ಆಗಿತ್ತು. ಹೆಚ್ಚುವರಿ ಸಮಯದಲ್ಲಿ (109ನೇ ನಿ.) ಅಭಿಷೇಕ್ ಗೋಲು ಹೊಡೆದು, ಗೆಲುವಿನ ರೂವಾರಿಯಾದರು.
2013ರಲ್ಲಿ ಉಭಯ ತಂಡಗಳು ಫೈನಲ್‌ಗೇರಿದ್ದವು. ಸರ್ವಿಸಸ್ ತಂಡವು ಶೂಟೌಟ್‌ನಲ್ಲಿ 4–3ರಿಂದ ಗೆಲುವು ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.