ADVERTISEMENT

ಫುಟ್‌ಬಾಲ್ | ‘ಬೆಳಗಾಂ ಯುನೈಟೆಡ್‌ಗೆ’ ಮಿಶ್ರಫಲ

ಯೂತ್ ಫುಟ್‌ಬಾಲ್ ಲೀಗ್‌: ಸ್ಪೋರ್ಟ್ಸ್ ಸ್ಕೂಲ್‌, ಕಿಕ್‌ಸ್ಟಾರ್ಟ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 15:09 IST
Last Updated 4 ಡಿಸೆಂಬರ್ 2021, 15:09 IST
ಫುಟ್‌ಬಾಲ್‌
ಫುಟ್‌ಬಾಲ್‌   

ಬೆಂಗಳೂರು: ಮೊದಲ ಪಂದ್ಯದಲ್ಲಿ ದಿ ಸ್ಪೋರ್ಟ್ಸ್ ಸ್ಕೂಲ್ ತಂಡಕ್ಕೆ ‘ಬೆಳಗಾಂ ಯುನೈಟೆಡ್‌’ 14 ವರ್ಷದೊಳಗಿನವರ ತಂಡ ಮಣಿದರೆ ಇದೇ ಕ್ಲಬ್‌ನ 17 ವರ್ಷದೊಳಗಿನವರ ತಂಡ ರೂ‌ಟ್ಸ್ ಎದುರು ಡ್ರಾ ಸಾಧಿಸಿತು.

ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಯೂತ್ ಲೀಗ್‌ನ ಶನಿವಾರದ ಪಂದ್ಯದಲ್ಲಿ ದಿ ಸ್ಪೋರ್ಟ್ಸ್ ಸ್ಕೂಲ್ 6–0ಯಿಂದ ಬೆಳಗಾವಿಯ ತಂಡವನ್ನು ಮಣಿಸಿತು. ವೇದ್ (6ನೇ ನಿಮಿಷ), ಗೌರಂಗ್‌ ವಿನಯ್ (22, 40ನೇ ನಿ), ಶ್ರೀಜಿತ್‌ (37ನೇ ನಿ), ಜಯ್‌ (50, 76ನೇ ನಿ) ಗೋಲು ಗಳಿಸಿದರು.

ಬಿಸಿಎಫ್‌ಸಿ ಮತ್ತು ಮೈಸೂರು ವಿಜಯನಗರ ತಂಡಗಳ ನಡುವಿನ ಪಂದ್ಯ 3–3ರಲ್ಲಿ ಡ್ರಾ ಆಯಿತು. ಬಿಸಿಎಫ್‌ಸಿ ಪರ ಶ್ರೇಷ್ಠ (2ನೇ ನಿ), ನೀಸ್‌ (18ನೇ ನಿ) ಮತ್ತು ಮದನ್ (75ನೇ ನಿ) ಗೋಲು ಗಳಿಸಿದರೆ ಮೈಸೂರು ಪರವಾಗಿ ಶಿಶಿರ್ (11, 80ನೇ ನಿ) ಮತ್ತು ಈಶನ್ (34ನೇ ನಿ) ಚೆಂಡನ್ನು ಗುರಿಮುಟ್ಟಿಸಿದರು.

ADVERTISEMENT

ಕಿಕ್‌ ಸ್ಟಾರ್ಟ್‌ 5–0ಯಿಂದ ರಮಣ್ ಎಸ್‌ಎ ವಿರುದ್ಧ ಜಯಿಸಿತು. ಪ್ರೇಮಿಶ್ (26, 47, 80ನೇ ನಿ), ಸುಜನ್ (35ನೇ ನಿ) ಮತ್ತು ಕಿಶೋರ್ (74ನೇ ನಿ) ಗೋಲು ಗಳಿಸಿದರು. ಬಿಡಿಎಫ್‌ಸಿ 4–1ರಲ್ಲಿ ಐಒಟಿ ಲಾಲಿಗಾವನ್ನು ಸೋಲಿಸಿತು. ಬಿಡಿಎಫ್‌ಸಿಗಾಗಿ ಕಿಪ್ಗಾನ್‌ (28, 83ನೇ ನಿ), ಚಾರ್ಯಲ್ (46ನೇ ನಿ), ಜುಬೈದ್ (89ನೇ ನಿ) ಗೋಲು ಗಳಿಸಿದರೆ ಲಾಲಿಗಾ ಪರ ಆರ್ಯನ್ (16ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

17 ವರ್ಷದೊಳಗಿನವರ ಪಂದ್ಯದಲ್ಲಿ ಬೆಳಗಾಂ ಯುನೈಟೆಡ್‌ 1–1ರಲ್ಲಿ ರೂಟ್ಸ್ ಜೊತೆ ಡ್ರಾ ಸಾಧಿಸಿತು. ಹರ್ಷವರ್ಧನ (44ನೇ ನಿ) ಬೆಳಗಾವಿ ತಂಡಕ್ಕಾಗಿ ಮತ್ತು ಗ್ಯಾಬ್ರಿಯೆಲ್ (79ನೇ ನಿ) ರೂಟ್ಸ್‌ಗಾಗಿ ಗೋಲು ಗಳಿಸಿದರು.

12 ವರ್ಷದೊಳಗಿನವರ ಪಂದ್ಯದಲ್ಲಿ ಬೋಕಾ ಜೂನಿಯರ್ 3–1ರಲ್ಲಿ ಸ್ಟೇಡಿಯಂ ವಿರುದ್ಧ ಗೆದ್ದಿತು. ಬೋಕಾ ತಂಡಕ್ಕಾಗಿ ಮಿರವ್ (5ನೇ ನಿ), ತರುಣ್ (16ನೇ ನಿ), ಧ್ರುವ್ (62ನೇ ನಿ) ಮತ್ತು ಸ್ಟೇಡಿಯಂ ಪರವಾಗಿ ಜಾಕ್ (28ನೇ ನಿ) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.