ADVERTISEMENT

ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌ ಪುನರಾರಂಭ

ಮೊದಲ ಪಂದ್ಯದಲ್ಲಿ ಯುವೆಂಟಸ್‌–ಲಯನ್‌‌‌ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 8:09 IST
Last Updated 7 ಆಗಸ್ಟ್ 2020, 8:09 IST
ಅಭ್ಯಾಸದಲ್ಲಿ ನಿರತ ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ (ಬಲ) ಮತ್ತು ಸಹ ಆಟಗಾರರು–ಎಎಫ್‌ಪಿ ಚಿತ್ರ
ಅಭ್ಯಾಸದಲ್ಲಿ ನಿರತ ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ (ಬಲ) ಮತ್ತು ಸಹ ಆಟಗಾರರು–ಎಎಫ್‌ಪಿ ಚಿತ್ರ   

ಬೆಂಗಳೂರು: ಬಹುನಿರೀಕ್ಷಿತ 2019–20ರ ಋತುವಿನ ಯೂರೋಪಿಯನ್‌ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟದ(ಯುಇಎಫ್‌ಎ) ಚಾಂಪಿಯನ್ಸ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯು ಶನಿವಾರದಿಂದ ಪುನರಾರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಯುವೆಂಟಸ್‌ ಹಾಗೂ ಲಯನ್‌ ತಂಡಗಳು ಪೈಪೋಟಿ ನಡೆಸಲಿವೆ. ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್‌ನಿಂದ ಫೈನಲ್‌ವರೆಗಿನ ಪಂದ್ಯಗಳನ್ನು ನಾಕೌಟ್‌ ಆಗಿ ಆಡಿಸಲಾಗುತ್ತಿದೆ.

ಕೊರೊನಾ ವೈರಸ್‌ ಉಪಟಳದ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ 16ನೇ ಸುತ್ತಿನ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಮ್ಯಾಂಚೆಸ್ಟರ್‌ ಸಿಟಿ ತಂಡ ರಿಯಲ್‌ ಮ್ಯಾಡ್ರಿಡ್‌ ವಿರುದ್ಧ, ಬಾರ್ಸಿಲೋನಾ ತಂಡ ನಪೋಲಿ ಎದುರು, ಬಾಯರ್ನ್‌ ಮ್ಯೂನಿಚ್‌ ತಂಡ ಚೆಲ್ಸಿಯಾ ತಂಡದ ಎದುರು ಆಡಲಿವೆ. ಮತ್ತೊಂದು ಪಂದ್ಯದಲ್ಲಿ ಯುವೆಂಟಸ್‌ ತಂಡವು ಆತಿಥೇಯ ಲಯನ್‌‌ ತಂಡದ ವಿರುದ್ಧ ಆಡಲಿದೆ. ಈ ಹಣಾಹಣಿಗಳಲ್ಲಿ ವಿಜೇತ ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲಿವೆ.

ಅಟ್ಲಾಂಟಾ ಬಿಸಿ, ಪ್ಯಾರಿಸ್‌ ಸೈಂಟ್‌ ಜರ್ಮನ್‌ ಎಫ್‌ಸಿ, ಆರ್‌ಬಿ ಲೇಪಿಜ್‌ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್‌ ತಂಡಗಳು ಈಗಾಗಲೇ ಎಂಟರ ಘಟ್ಟದಲ್ಲಿ ಸ್ಥಾನ ಗಳಿಸಿವೆ.

ADVERTISEMENT

ನೇರ ಪ್ರಸಾರ: ಸೋನಿ ಟೆನ್‌

ಪಂದ್ಯಗಳ ಆರಂಭ: 12.30 (ಭಾರತೀಯ ಕಾಲಮಾನ)

ಪಂದ್ಯಗಳ ವೇಳಾಪಟ್ಟಿ

ಆಗಸ್ಟ್‌ 8- ಯುವೆಂಟಸ್‌–ಲಯನ್‌, ಟುರಿನ್‌

ಆಗಸ್ಟ್‌ 8- ಮ್ಯಾಂಚೆಸ್ಟರ್‌ ಸಿಟಿ-ರಿಯಲ್‌ ಮ್ಯಾಡ್ರಿಡ್‌, ಮ್ಯಾಂಚೆಸ್ಟರ್‌

ಆಗಸ್ಟ್‌ 9- ಬಾಯರ್ನ್‌ ಮ್ಯೂನಿಚ್‌– ಚೆಲ್ಸಿಯಾ, ಮ್ಯೂನಿಚ್‌

ಆಗಸ್ಟ್‌ 9- ಬಾರ್ಸಿಲೋನಾ– ನಪೋಲಿ, ಬಾರ್ಸಿಲೋನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.